ಭಾರತ ಫುಟ್ಬಾಲ್ ತಂಡ ಆಯ್ಕೆ, ಚೆಟ್ರಿ ಅಲಭ್ಯ
ಇರಾನ್ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯ
ಹೊಸದಿಲ್ಲಿ, ಮಾ.21: ಇರಾನ್ ವಿರುದ್ಧದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಿಂದ ಭಾರತದ ನಾಯಕ ಸುನೀಲ್ ಚೆಟ್ರಿ ಹೊರಗುಳಿದಿದ್ದಾರೆ. ಚೆಟ್ರಿ ಅನುಪಸ್ಥಿತಿಯು ಭಾರತಕ್ಕೆ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.
ರಶ್ಯದಲ್ಲಿ ನಡೆಯಲಿರುವ 2018ರ ವಿಶ್ವಕಪ್ ಟೂರ್ನಿಗಾಗಿ ನಡೆಯಲಿರುವ ಅರ್ಹತಾ ಪಂದ್ಯದ ಎರಡನೆ ಸುತ್ತಿನ ಪಂದ್ಯ ಗುರುವಾರ ಟೆಹ್ರಾನ್‌ನಲ್ಲಿ ನಡೆಯಲಿದೆ. 22 ಸದಸ್ಯರನ್ನು ಒಳಗೊಂಡ ಭಾರತದ ಫುಟ್ಬಾಲ್ ತಂಡ ಸೋಮವಾರ ರಾತ್ರಿ ಟೆಹ್ರಾನ್‌ಗೆ ಪ್ರಯಾಣ ಬೆಳೆಸಲಿದೆ.
ಚೆಟ್ರಿಗೆ ಐ-ಲೀಗ್‌ನ ವೇಳೆ ಗಾಯದ ಸಮಸ್ಯೆ ಕಾಣಿಸಿಕೊಂಡ ಕಾರಣ ಇರಾನ್‌ಗೆ ತೆರಳುತ್ತಿಲ್ಲ.
ಭಾರತದ ಫುಟ್ಬಾಲ್ ತಂಡ:
ಗೋಲ್‌ಕೀಪರ್‌ಗಳು: ಸುಬ್ರತಾ ಪಾಲ್, ಗುರುಪ್ರೀತ್ ಸಿಂಗ್ ಸಂಧು, ಕರಣ್‌ಜಿತ್ ಸಿಂಗ್.
ಡಿಫೆಂಡರ್‌ಗಳು: ಎ.ಕೊಂಗ್‌ಜೀ, ಅಗಸ್ಟೈನ್ ಫೆರ್ನಾಂಡಿಸ್, ಅರ್ನಬ್ ಮಂಡಳ್, ಪ್ರೀತಮ್ ಕೊಟಾಲ್, ಸಂದೇಶ್ ಜಿಂಗಾನ್, ನಾರಾಯಣ್ ದಾಸ್, ಲಾಲ್‌ಚುಯನ್‌ಮಾವಿಯಾ.
ಮಿಡ್‌ಫೀಲ್ಡರ್‌ಗಳು: ಪ್ರಣಯ್ ಹಲ್ದರ್, ಬಿಕಾಶ್ ಜೈರು, ಕವಿನ್ ಲೊಬೊ, ರೌವ್ಲಿನ್ ಬೊರ್ಗೆಸ್, ಫ್ರಾನ್ಸಿಸ್ ಫೆರ್ನಾಂಡಿಸ್, ಹರ್ಮನ್‌ಜೋತ್ ಸಿಂಗ್, ಉದಾಂತ್ ಸಿಂಗ್, ವಿನೀತ್ ರೈ, ಸತ್ಯಸೇನ್ ಸಿಂಗ್. ಫಾರ್ವರ್ಡ್‌ಗಳು: ಜೆಜೆ ಲಾಲ್‌ಪೆಕುಲ್ವ, ಸುಮೀತ್ ಪಾಸ್ಸಿ, ಹಾಲಿಚರಣ್ ನರ್ಝರಿ.







