ಐಸಿಸಿ ಮಹಿಳೆಯರ ಟ್ವೆಂಟಿ-20 ವಿಶ್ವಕಪ್: ನ್ಯೂಝಿಲೆಂಡ್‌ಗೆ ಸುಲಭ ಜಯ

ನಾಗ್ಪುರ,ಮಾ.21: ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್‌ನ ನೆರವಿನಿಂದ ನ್ಯೂಝಿಲೆಂಡ್‌ನ ಮಹಿಳಾ ತಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ 10ನೆ ಗ್ರೂಪ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿದೆ.
ಸೋಮವಾರ ಇಲ್ಲಿನ ಜಮ್ತಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ ಕೇವಲ 103 ರನ್ ಗಳಿಸಿತು.
ನ್ಯೂಝಿಲೆಂಡ್‌ನ ಬೌಲರ್‌ಗಳಾದ ಕಾಸ್ಪರೆಕ್(3-13) ಹಾಗೂ ಬರ್ಮಿಂಗ್‌ಹ್ಯಾಮ್(2-23) ಆಸ್ಟ್ರೇಲಿಯವನ್ನು ಕನಿಷ್ಠ ಮೊತ್ತಕ್ಕೆ ನಿಯಂತ್ರಿಸಿದರು. ಆಸೀಸ್‌ನ ಪರ ಪೆರ್ರಿ(42) ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಗೆಲ್ಲಲು ಸುಲಭ ಸವಾಲು ಪಡೆದ ನ್ಯೂಝಿಲೆಂಡ್ ವನಿತೆಯರು 16.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆಲುವಿನ ರನ್ ಬಾರಿಸಿದರು. ಕಿವೀಸ್‌ನ ಪರ ಆರಂಭಿಕ ಆಟಗಾರ್ತಿ ಪ್ರೈಸ್ಟ್(34 ರನ್, 27 ಎಸೆತ, 5 ಬೌಂಡರಿ, 1 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡರು. ಪ್ರೈಸ್ಟ್ ಹಾಗೂ ಬೇಟ್ಸ್ ಮೊದಲ ವಿಕೆಟ್‌ಗೆ 58 ರನ್ ಸೇರಿಸಿ ಕಿವೀಸ್‌ಗೆ ಉತ್ತಮ ಆರಂಭ ನೀಡಿದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ: 20 ಓವರ್‌ಗಳಲ್ಲಲಿ 103/8
(ಪೆರ್ರಿ 42, ಜೊನಾಸ್ಸೆನ್ 23,ಮೂನಿ ಔಟಾಗದೆ 15, ಕಾಸ್ಪೆರೆಕ್ 3-13, ಬರ್ಮಿಂಗ್‌ಹ್ಯಾಮ್ 2-23)
ನ್ಯೂಝಿಲೆಂಡ್: 16.2 ಓವರ್‌ಗಳಲ್ಲಿ 104/4
(ಪ್ರೈಸ್ಟ್ 34, ಬೇಟ್ಸ್ 23, ಡಿವೈನ್ 17, ಸಾಟರ್‌ವೇಟ್ ಔಟಾಗದೆ 16)







