ಹಸಿರು ಪರಿಸರ ನಿರ್ಮಾಣಕ್ಕೆ ನ್ಯಾನೋ ತಂತ್ರಜ್ಞಾನ ಪೂರಕ: ಪ್ರೊ.ಮನೋಚ
ಮಂಗಳೂರು ವಿವಿಯಲ್ಲಿ ರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ

ಕೊಣಾಜೆ, ಮಾ.21: ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ‘ಇಂಧನ, ಪರಿಸರ ಮತ್ತು ಆರೋಗ್ಯದಲ್ಲಿ ನ್ಯಾನೋ ಸಾಮಗ್ರಿಗಳ ಪಾತ್ರ’ ಎಂಬ ವಿಷಯದಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ವಿವಿಯ ಮಂಗಳಾ ಸಭಾಂಗಣದಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕಾನ್ಪುರ ಡಿಆರ್‌ಡಿಒ ಸಂಸ್ಥೆಯ ವಿಜ್ಞಾನಿ ಪ್ರೊ.ಲಲಿತ್‌ಮೋಹನ್ ಮನೋಚ, ಔಷಧ, ಇಲೆಕ್ಟ್ರಾನಿಕ್ ಮತ್ತು ಕೃಷಿ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನದಿಂದ ಕೀಟನಾಶಕಗಳ ಬಳಕೆ ಕನಿಷ್ಠ ಪ್ರಮಾಣಕ್ಕೆ ಇಳಿಯಲಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ ಹಸಿರು ಪರಿಸರ ನಿರ್ಮಾಣ ಸಾಧ್ಯ ಎಂದರು. ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹಂತಹಂತವಾಗಿ ಕ್ಷೀಣಿಸಿ ಗಿಡ-ಮರಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಲ್ಲದೆ ಪ್ರಾಣಿ, ಪಕ್ಷಿಗಳು, ಮನುಷ್ಯರ ಆರೋಗ್ಯದ ವೆುೀಲೂ ಪ್ರತಿಕೂಲ ಪರಿಣಾಮ ಬೀರುತ್ತವೆ. ಆದರೆ ನ್ಯಾನೋ ತಂತ್ರಜ್ಞ್ಞಾನದಿಂದ ಪರಿಸರ ಸುರಕ್ಷಿತವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಪ್ರೊ.ಕೆ.ಭೈರಪ್ಪ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಆವಿಷ್ಕಾರ, ಸಂಶೋಧನೆಗಳು ನಿರಂತರ ನಡೆಯಬೇಕಿದ್ದು, ಇದರ ಪ್ರಯೋಜನ ಎಲ್ಲರಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರು ಮಂಗಳೂರು ವಿಶ್ವ ವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಮೂಲ ಸೌಕರ್ಯ ಅಭಿವೃದ್ಧಿ ಸಂಬಂಧ 141 ಕೋ.ರೂ. ಅನುದಾನದ ಭರವಸೆ ನೀಡಿದ್ದಾರೆಎಂದು ತಿಳಿಸಿದರು. ಕಾರ್ಯಕ್ರಮ ಸಂಚಾಲಕಿ ಪ್ರೊ.ಬಿ.ಕೆ.ಸರೋಜಿನಿ ಸ್ವಾಗತಿಸಿ ದರು. ಸಹಸಂಚಾಲಕ ಪ್ರೊ.ಭೋಜ ಪೂಜಾರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಡಾ.ಅವಿನಾಶ್ ಕುಡ್ವ ವಂದಿಸಿದರು.





