ವಾಸಸ್ಥಳದಲ್ಲಿಯೇ ಗಾಂಜಾ ಬೆಳೆಸಿದ ಒರಿಸ್ಸಾದ ಕಾರ್ಮಿಕರು!

ಕೊಚ್ಚಿ, ಮಾ.22: ಗಾಂಜಾ ಎಷ್ಟು ಜನಪ್ರಿಯವಾಗಿದೆಯೆಂದರೆ ಈಗ ಜನರು ತಾವು ಇರುವಲ್ಲಿಯೇ ಅದರ ಗಿಡಗಳನ್ನು ನೆಡುತ್ತಿದ್ದಾರೆ. ಇಂತಹ ಆಶ್ಚರ್ಯಕರ ಪ್ರಕರಣವೊಂದು ಕೇರಳದಿಂದ ವರದಿಯಾಗಿದೆ.
ವಾಸ ಸ್ಥಳದಲ್ಲಿ ಗಾಂಜಾದ ಗಿಡಗನ್ನು ನೆಟ್ಟು ಪೋಷಿಸುತ್ತಿದ್ದ ಇಬ್ಬರು ಒಡಿಸಾ ಮೂಲದ ಕಾರ್ಮಿಕರಾದ ಮುನ್ನ ಸಿಂಗ್ ಮತ್ತು ಪವಿತ್ರ ಸಾಹುಲ್ ಎಂಬವರನ್ನು ಅಲುವಾ ಪೊಲೀಸರು ಬಂಧಿಸಿದ್ದಾರೆ.
ಸ್ವಂತ ಬಳಕೆಗಾಗಿ ಗಾಂಜಾ ಗಿಡಗಳನ್ನು ನೆಟ್ಟು ಬೆಳಸಿದ್ದೇವೆಂದು ಪೊಲೀಸರಿಗೆ ತಿಳಿಸಿದ್ದಾರೆ. ಕೊಚ್ಚಿ ಮೆಟ್ರೋ ಕೆಲಸಕ್ಕಾಗಿ ಬಂದಿದ್ದ ಆರೋಪಿಗಳು ಇವರು ವಾಸಿಸುತ್ತಿರುವ ಅಲುವ ಚೋರ್ಣಿಕರೆ ಎಂಬಲ್ಲಿನ ಬಾಡಿಗೆ ಮನೆಯ ಬಳಿಯಿಂದ ಗಾಂಜಾ ಗಿಡಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಕಳೆದ ಆರು ತಿಂಗಳಿಂದ ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲ ಹೊರರಾಜ್ಯಗಳಿಂದ ಗಾಂಜಾವನ್ನು ಮಾರಾಟ ಮಾಡಲಿಕ್ಕಾಗಿಯೂ ತಂದಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಸ್ವಂತಬಳಕೆಗಾಗಿ ಈ ಗಿಡಗಳನ್ನು ತಾವು ನೆಟ್ಟಿದ್ದು ಹೊರರಾಜ್ಯಗಳಿಂದ ಬರುವ ಗಾಂಜಾದ ಗುಣಮಟ್ಟ ಕಳಪೆಯಾದ್ದರಿಂದ ತಾವೀ ಗಿಡಗಳನ್ನು ನೆಟ್ಟು ಪೋಷಿಸಿದ್ದೇವೆಂದು ಅವರು ಪೊಲೀಸರಿಗೆ ಹೇಳಿದ್ದಾರೆ. ಅಲುವ ಎಸ್ಸೈ ಹನಿ ಕೆ. ದಾಸ್‌ರ ನೇತೃತ್ವಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಕೃಪೆ: ಇ ವಾರ್ತಾ







