ರಜೆಯಿಂದ ಮರಳಿದ ಹೈದರಾಬಾದ್ ಯುನಿವರ್ಸಿಟಿ ವೈಸ್ ಚಾನ್ಸಲರ್‌ಗೆ ವಿದ್ಯಾರ್ಥಿಗಳಿಂದ ಹಲ್ಲೆ: ಪೀಠೋಪಕರಣಗಳಿಗೆ ಹಾನಿ

ಹೈದರಾಬಾದ್, ಮಾ. 22: ಹೈದರಾಬಾದ್ ಯನಿವರ್ಸಿಟಿಯ ವೈಸ್ ಚಾನ್ಸಲರ್ ಪ್ರೊ. ಅಪ್ಪಾರಾವ್ ರಿಗೆ ಕೆಲವು ವಿದ್ಯಾರ್ಥಿಗಳು ಥಳಿಸಿದ ಘಟನೆ ವರದಿಯಾಗಿದೆ.
ವಿದ್ಯಾರ್ಥಿಗಳು ಪೀಠೋಪಕರಣಗಳನ್ನು ಪುಡಿಗುಟ್ಟಿದ್ದು ಮನೆಗೆ ಹಾನಿ ಎಸಗಿದ್ದಾರೆ. ಘಟನೆಯು ಅಪ್ಪಾರಾವ್ ಗೆಸ್ಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ಕರೆದ ನಂತರ ನಡೆದಿದೆ.
ಅಪ್ಪಾರಾವ್ ಎರಡು ತಿಂಗಳ ರಜೆಯಲ್ಲಿ ಹೋಗಿದ್ದು ನಂತರ ಇದೀಗ ಅವರು ಯುನಿವರ್ಸಿಟಿಗೆ ಮರಳಿ ಬಂದಿದ್ದಾರೆನ್ನಲಾಗಿದೆ. ಪ್ರತಿಭಟನಾ ನಿರತ ವಿದ್ಯರ್ಥಿಗಳು ಪೀಠೋಪಕರಣಗಳನ್ನಲ್ಲದೆ ಕಂಪ್ಯೂಟರನ್ನೂ ಒಡೆದುಹಾಕಿದ್ದರೆ. ಕಚೇರಿಗೆ ಹಾನಿಯೆಸಗಿದ್ದಾರೆ.
ಮಾಹಿತು ತಿಳಿದು ಧಾವಿಸಿ ಬಂದ ಪೊಲೀಸರು ಪ್ರತಿಭಟನಕಾರರಾದ ವಿದ್ಯಾರ್ಥಿಗಳನ್ನು ಓಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಅಂಬೇಡ್ಕರ್ ಯನಿವರ್ಸಿಟಿ ಎಸೋಸಿಯೇಶನ್‌ನ ಸದಸ್ಯರು ರೋಹಿತ್ ವೇಮುಲಾ ಆತ್ಮಹತ್ಯೆಗೆ ಪ್ರೋ. ಅಪ್ಪಾರಾವ್ ಕಾರಣವೆಂದು ಆರೋಪಿಸುತ್ತಿದ್ದು. ಅಪ್ಪಾರಾವ್ ನಿಯಮಗಳನ್ನು ಪಾಲಿಸಿಲ್ಲ ಮತ್ತು ಉದ್ದೇಶಪೂರ್ವಕವಾಗಿ ರೋಹಿತ್ ಮತ್ತು ಇತರ ವಿದ್ಯಾರ್ಥಿಗಳನ್ನು ಗುರಿಮಾಡಿದರು ಎಂದು ಹೇಳುತ್ತಿದ್ದಾರೆಂದು ವರದಿಯಾಗಿದೆ.







