ಕರ್ತವ್ಯಕ್ಕೆ ಹಾಜರಾದ ಹೈದರಾಬಾದ್ ವಿವಿ ಉಪಕುಲಪತಿ ಅಪ್ಪಾರಾವ್ ರನ್ನು ಹಿಂದಕ್ಕೆ ಕಳುಹಿಸಿದ ವಿದ್ಯಾರ್ಥಿಗಳು
ಕಚೇರಿಗೆ ದಾಳಿ; ಪಿಠೋಪಕರಣಗಳ ಧ್ವಂಸ

ಹೈದರಾಬಾದ್, ಮಾ.22: ಕಳೆದ ಎರಡು ತಿಂಗಳ ಹಿಂದೆ ರಜೆಯಲ್ಲಿ ತೆರಳಿ ಇಂದು ಕರ್ತವ್ಯಕ್ಕೆ ಮರಳಿದ ಹೈದರಾಬಾದ್‌ನ ಕೇಂದ್ರ ವಿವಿಯ ಉಪಕುಲಪತಿ ಪ್ರೊ. ಅಪ್ಪಾ ರಾವ್ ಅವರನ್ನು ವಿದ್ಯಾರ್ಥಿಗಳು ಹಿಂದಕ್ಕೆ ಕಳುಹಿಸಿದ ಘಟನೆ ವರದಿಯಾಗಿದೆ.
ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಹಿನ್ನೆಲೆಯಲ್ಲಿ ರಜೆ ಮೇಲೆ ತೆರಳಿದ್ದ ಉಪಕುಲಪತಿ ಅಪ್ಪಾರಾವ್ ಕರ್ತವ್ಯಕ್ಕೆ ಹಾಜರಾಗಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ನೂರಾರು ಮಂದಿ ಅವರ ಕಚೇರಿ ಹಾಗೂ ವಸತಿಗೃಹಕ್ಕೆ ಮುತ್ತಿಗೆ ಹಾಕಿದರು.
ವಿಸಿ ಕಚೇರಿಯೊಳಗಿನ ವಸ್ತುಗಳು ಮತ್ತು ಪೀಠೋಪಕರಣಗಳನ್ನು ಪುಡಿ ಪುಡಿ ಮಾಡಿದರು. ಅಪ್ಪಾರಾವ್‌ಗೆ ವಾಪಾಸ್ ತೆರಳುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.
ರಾವ್ ಅವರು ರೋಹಿತ್ ವೇಮುಲಾ ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಆರೋಪ ಎದುರಿಸುತ್ತಿದ್ದರು. ಈ ಪೈಕಿ ಅಮಾನತುಗೊಂಡಿದ್ದ ರೋಹಿತ್ ಜನವರಿ 17ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
Next Story





