ಪುತ್ತೂರು : ಕಲಾಶಿಕ್ಷಕನಿಗೆ ಬೀಳ್ಕೊಡುಗೆ
.jpg)
ಕಲಾಶಿಕ್ಷಕ ಪುರುಷೋತ್ತಮ್ ಎಂ.ಎಸ್. ಅವರನ್ನು ಸನ್ಮಾನಿಸಲಾಯಿತು.
ಪುತ್ತೂರು: ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಕಳೆದ 42 ವರ್ಷಗಳಿಂದ ಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪುರುಷೋತ್ತಮ ಎಂ.ಎಸ್. ಅವರಿಗೆ ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ ನಡೆಯಿತು. ಪುರುಷೋತ್ತಮ ಎಂ.ಎಸ್. ಅವರ ಗರಡಿಯಲ್ಲಿ ಪಳಗಿ ಕಲಾವಿದರಾಗಿ ಗುರುತಿಸಿಕೊಂಡ ವಿದ್ಯಾರ್ಥಿಗಳನ್ನು ಇದೇ ಸಂದರ್ಭ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಆಲ್ಫ್ರೆಡ್ ಜೆ. ಪಿಂಟೋ ಮಾತನಾಡಿ, ಉತ್ತಮ ಮರ ಉತ್ತಮ ಫಸಲನ್ನೇ ನೀಡುತ್ತದೆ. ಉತ್ತಮ ಶಿಕ್ಷಕ ಇನ್ನಷ್ಟು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಾನೆ. ಪುರುಷೋತ್ತಮ ಎಂ.ಎಸ್. ಅವರು ಮುಂದೆಯೂ ಪ್ರೌಢಶಾಲೆಯಲ್ಲೇ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಸುಳ್ಯ ಕೆವಿಜಿ ಸಂಸ್ಥೆ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಮಾತನಾಡಿ, ಶಿಸ್ತು, ಕಠಿಣ ಶ್ರಮ, ಪ್ರಾಮಾಣಿಕತೆ, ಸಮಯಪ್ರಜ್ಞೆ, ತ್ಯಾಗ ಮೊದಲಾದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು ಪುರುಷೋತ್ತಮ್. ಕಲಾ ಶ್ರೀಮಂತಿಕೆಯುಳ್ಳ ಶಿಕ್ಷಕ ಜೀವನದಲ್ಲಿ ಮುಂದೆ ಬರುತ್ತಾನೆ ಎಂದರು.
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಕೆ.ಜಗನ್ನೀವಾಸ್ ರಾವ್, ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷೆ ವಿಜಯ ಸರಸ್ವತಿ, ವಿದ್ಯಾರ್ಥಿಗಳ ಪರವಾಗಿ ಶ್ರೀದೇವಿ, ಜೋಯ್ಸನ್, ಶಿಕ್ಷಕರಾದ ರಿಚಾರ್ಡ್ ವೇಗಸ್ ಮಾತನಾಡಿದರು. ಪುರುಷೋತ್ತಮ್ ಎಂ.ಎಸ್. ಅವರ ತಾಯಿ, ಪತ್ನಿ ಉಪಸ್ಥಿತರಿದ್ದರು.
ರಾಜ್ಯ- ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಕಲಾವಿದರಾದ ಮೋನಪ್ಪ, ಸುಧಾಕರ ದರ್ಬೆ, ಆನಂದ ಬೆದ್ರಾಳ, ರಾಮ ಪ್ರಸಾದ, ದಿನೇಶ್ ಎಂ.ಪಿ, ಗಣೇಶ್ ಕೆ.ಸಿ, ರೋಬರ್ಟ್ ಡಿಸಿಲ್ವಾ, ವಿಘ್ನೇಶ್ ವಿಶ್ವಕರ್ಮ, ಪ್ರವೀಣ ವರ್ಣಕುಟೀರ, ರವೀಂದ್ರ ನಾಯಕ್, ರಿತೇಶ್ ಪಾಂಗಳಾ, ಶಿವಪ್ರಸಾದ್, ಪ್ರಜ್ಞಾ, ಚೇತನ್ ಕುಮಾರ್, ಪ್ರಸಾದ್ ಕೆ.ಎಸ್, ರಾಘವೇಂದ್ರ, ತಾರಾನಾಥ, ರಂಜಿತ್ ಪಿ, ದಿನೇಶ್, ತಾರಾನಾಥ ಆಚಾರ್ಯ, ದಿವಾಕರ ಆಚಾರ್ಯ, ಸುಶಾಂತ್, ಪ್ರೀತಂ ಎಂ, ಸತ್ಯ ರಾಮರಾವ್, ವೈಶಾಲಿ ಎಸ್. ಭಟ್, ವರ್ಷಾ ಮೊಳೆಯಾರ್, ಕವೀಶ ಎಂ.ಪಿ. ಇವರನ್ನು ಕಲಾ ಶಿಕ್ಷಕ ಪುರುಷೋತ್ತಮ ಎಂ.ಎಸ್. ಗೌರವಿಸಿದರು.
ಶಿಕ್ಷಕ ರಾಜಶೇಖರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿದಾಯ ಗೀತೆ ಹಾಡಿದರು. ಮುಖ್ಯೋಪಾಧ್ಯಾಯ ಓಸ್ವಾಲ್ಡ್ ನಾರ್ಬರ್ಟ್ ರೋಡ್ರಿಗಸ್ ಸ್ವಾಗತಿಸಿ, ಶಿಕ್ಷಕಿ ಲಿಯೋನಿಲ್ಲಾ ವೇಗಸ್ ಸನ್ಮಾನ ಪತ್ರ ವಾಚಿಸಿದರು.
ಪುರುಷೋತ್ತಮ್ ಎಂ.ಎಸ್. ಅವರು ಕಲಾವಿದರಾಗಿ ಗುರುತಿಸಿಕೊಂಡ ತನ್ನ ವಿದ್ಯಾರ್ಥಿಗಳನ್ನು ಗೌರವಿಸಿದರು.
.jpg)





