ಮಂಗಳೂರು: ಅಕ್ಷರ ಸಂತ ಹಾಜಬ್ಬರಿಗೆ ರಾಮಗೋವಿಂದ ಪುರಸ್ಕಾರ
ಮಂಗಳೂರು, ಮಾರ್ಚ್, 22 ; ಬೀದಿ ಬದಿಯಲ್ಲಿ ಕಿತ್ತಳೆ ಮಾರಾಟ ಮಾಡಿ ಬಡಮಕ್ಕಳಿಗೆ ಅಕ್ಷರಕ್ಕಾಗಿ ಜೀವನ ಮುಡಿಪಿಟ್ಟಿರುವ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಮೈಸೂರಿನ ಡಿ. ರಮಾಬಾಯಿ ಚಾರಿಟೇಬಲ್ ಫೌಂಡೇಷನ್ ಮತ್ತು ಎಂ. ಗೋಪಿನಾಥ ಶೆಣೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2016ರ ಸಾಲಿನಿಂದ ಆರಂಭಿಸಿರುವ ರಾಮಗೋವಿಂದ ಪುರಸ್ಕಾರವನ್ನು ಮೈಸೂರಿನ ಕಲಾಭವನದಲ್ಲಿ ಭಾನುವಾರ ನೀಡಲಾಯಿತು.
ಈ ಬಗ್ಗೆ ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು, ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ರಾಮಗೋವಿಂದ ಪುರಸ್ಕಾರ ಲಭಿಸಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ. ಹಾಜಬ್ಬರು ಇನ್ನಷ್ಟು ಪುರಸ್ಕಾರಗಳಿಗೆ ಬಾಜನರಾಗಲಿ ಎಂದು ಶುಭ ಹಾರೈಸಿದ್ದಾರೆ. ಈ ಪುರಸ್ಕಾರ ರೂ. 3 ಲಕ್ಷ ನಗದನ್ನು ಹೊಂದಿದೆ.
Next Story





