ಕುಂಬಳೆ : ಉಪೇಕ್ಷಿತ ಸ್ಥಿತಿಯಲ್ಲಿ ಕಾರು ಪತ್ತೆ
ಮಂಜೇಶ್ವರ : ಕುಂಬಳೆ ಪೇಟೆಯಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಆಲ್ಟೋ ಕಾರೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಾಸರಗೋಡು ನೋಂದಾವಣೆ ಹೊಂದಿರುವ ಸೋಮವಾರ ಬೆಳಗ್ಗೆಯಿಂದಲೇ ಉಪೇಕ್ಷಿತ ಸ್ಥಿತಿಯಲ್ಲಿದ್ದು, ಬಾಗಿಲು ತೆರೆದ ಸ್ಥಿತಿಯಲ್ಲಿದೆ ಮತ್ತು ಒಂದು ಚಕ್ರ ಪಂಕ್ಚರ್‌ಗೊಂಡಿದೆ. ಮಂಗಳವಾರ ಬೆಳಗ್ಗೆ ನಾಗರಿಕರು ನೀಡಿದ ಮಾಹಿತಿಯ ಮೇರೆಗೆ ಪೋಲಿಸರು ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾರಿನೊಳಗೆ ಫಿರೋರ್ ಬೆಳ್ಳೂರು ಎಂಬವರ ಆರ್.ಸಿ ಪುಸ್ತಕ ಮತ್ತು ರೈಲ್ವೇ ನಿಲ್ದಾಣದ ಪಾರ್ಕಿಂಗ್ ಸ್ಲಿಪ್ ಪತ್ತೆಯಾಗಿದೆ. .ಕಳವುಗೈದು ಸಾಗಿಸುತ್ತಿದ್ದಾಗ ಕಾರು ಕೆಟ್ಟು ಹೋದ ಹಿನ್ನೆಲೆಯಲ್ಲಿ ಉಪೇಕ್ಷಿಸಿ ಪರಾರಿಯಾಗಿರಬಹುದೇ ಎಂದು ಪೋಲಿಸರು ಸಂಶಯ ವ್ಯಕ್ತಪಡಿಸಿದ್ದಾರೆ.
Next Story





