ಟ್ವೆಂಟಿ-20 ವಿಶ್ವಕಪ್; ಹ್ಯಾಟ್ರಿಕ್ ಗೆಲುವಿನೊಂದಿಗೆ ಕಿವೀಸ್ ಸೆಮಿಫೈನಲ್‌ಗೆ
ಗಪ್ಟಿಲ್ 80; ಪಾಕ್‌ಗೆ 22 ರನ್‌ಗಳ ಸೋಲು

ಮೊಹಾಲಿ, ಮಾ.22: ನ್ಯೂಝಿಲೆಂಡ್ ತಂಡ ಟ್ವೆಂಟಿ-20 ವಿಶ್ವಕಪ್‌ನ ಸೂಪರ್-10 ಪಂದ್ಯದಲ್ಲಿ ಇಂದು ಪಾಕಿಸ್ತಾನ ವಿರುದ್ಧ 22 ರನ್‌ಗಳ ಜಯ ಗಳಿಸಿದ್ದು, ಇದರೊಂದಿಗೆ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.
ಗೆಲುವಿಗೆ 181 ರನ್‌ಗಳ ಕಠಿಣ ಸವಾಲು ಪಡೆದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 158 ರನ್ ಗಳಿಸಿತು.ಪಾಕ್ ತಂಡದ ಶಾರ್ಜಿಲ್ ಖಾನ್ 47 ರನ್, ಶೆಹಝಾದ್ 30ರನ್ ಖಾಲಿದ್ ಲತೀಫ್ 4 ರನ್, ಶಾಹಿದ್ ಅಫ್ರಿದಿ 19 ರನ್, ಉಮರ್ ಅಕ್ಮಲ್ 24ರನ್ , ಶುಐಬ್ ಮಲಿಕ್ ಔಟಾಗದೆ15 ರನ್, ಸರ್ಫರಾಜ್ ಅಹ್ಮದ್ ಔಟಾಗದೆ 11 ರನ್ ಗಳಿಸಿದರು.
ನ್ಯೂಝಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 180 ರನ್ ಗಳಿಸಿತ್ತು.ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ತಂಡದ ಪರ ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್ 80 ರನ್ (48ಎ, 10ಬೌ,3ಸಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು ಗಪ್ಟಿಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಮೊದಲ ವಿಕೆಟ್‌ಗೆ 62 ರನ್‌ಗಳನ್ನು ಜಮೆ ಮಾಡಿದರು
. 7.2ನೆ ಓವರ್‌ನಲ್ಲಿ ವಿಲಿಯಮ್ಸನ್(17) ಮುಹಮ್ಮದ್ ಇರ್ಫಾನ್ ಎಸೆತದಲ್ಲಿ ಶಾಹಿದ್ ಅಫ್ರಿದಿಗೆ ಕ್ಯಾಚ್ ನೀಡುವುದರೊಂದಿಗೆ ತಂಡದ ಮೊದಲ ವಿಕೆಟ್ ಪತನಗೊಂಡಿತು.ಮುನ್ರೊ (7) ಬೇಗನೆ ಔಟಾದರು.
ಮೂರನೆ ವಿಕೆಟ್‌ಗೆ ಗಪ್ಟಿಲ್ ಮತ್ತು ಕೋರಿ ಆಂಡರ್ಸನ್ 52 ರನ್ ಜಮೆ ಮಾಡಿದರು.ಗಪ್ಟಿಲ್ ಅವರು ಮುಹಮ್ಮದ್ ಶಮಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆಂಡರ್ಸನ್ 21 ರನ್ ಗಳಿಸಿದರು. ರಾಸ್ ಟೇಲರ್ ಔಟಾಗದೆ 36 ರನ್ , ಲೂಕ್ ರೊಂಚಿ 11 ರನ್ ಮತ್ತು ಎಲಿಯಟ್ ಔಟಾಗದೆ 1 ರನ್ ಗಳಿಸಿದರು.ಪಾಕ್ ತಂಡ ನಾಯಕ ಶಾಹಿದ್ ಅಫ್ರಿಧಿ 40ಕ್ಕೆ 2 , ಮುಹಮ್ಮದ್ ಶಮಿ 23ಕ್ಕೆ 2 ಮತ್ತು ಮುಹಮ್ಮದ್ ಇರ್ಫಾನ್ 46ಕ್ಕೆ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ನ್ಯೂಝಿಲೆಂಡ್: 20 ಓವರ್‌ಗಳಲ್ಲಿ 180/5
ಗಪ್ಟಿಲ್ ಬಿ ಮುಹಮ್ಮದ್ ಸಮಿ 80
ವಿಲಿಯಮ್ಸನ್ ಸಿ ಅಫ್ರಿದಿ ಬಿ ಇರ್ಫಾನ್ 17
ಮುನ್ರೊ ಸಿ ಲತೀಫ್ ಬಿ ಅಫ್ರಿದಿ 7
ಆ್ಯಂಡರ್ಸನ್ ಸಿ ಮಲಿಕ್ ಬಿ ಅಫ್ರಿದಿ 21
ರಾಸ್ ಟೇಲರ್ ಔಟಾಗದೆ 36
ರೊಂಚಿ ಸಿ ಮಲಿಕ್ ಬಿ ಸಮಿ 11
ಎಲಿಯಟ್ ಔಟಾಗದೆ 1
ಇತರ 7
ವಿಕೆಟ್ ಪತನ: 1-62,2-75, 3-127, 4-132, 5-164.
ಬೌಲಿಂಗ್ ವಿವರ:
ಮುಹಮ್ಮದ್ ಆಮಿರ್ 4-0-41-0
ಮುಹಮ್ಮದ್ ಇರ್ಫಾನ್ 4-0-46-1
ಮುಹಮ್ಮದ್ ಸಮಿ 4-0-23-2
ಇಮಾದ್ ವಸಿಂ 4-0-26-0
ಶಾಹಿದ್ ಅಫ್ರಿದಿ 4-0-40-2
ಪಾಕಿಸ್ತಾನ: 20 ಓವರ್‌ಗಳಲ್ಲಿ 158/5
ಶಾರ್ಜಿಲ್ ಖಾನ್ ಸಿ ಗಪ್ಟಿಲ್ ಬಿ ಮಿಲ್ನೆ 47
ಅಹ್ಮದ್ ಶಹಝಾದ್ ಸಿ ಗಪ್ಟಿಲ್ ಬಿ ಸಾಂಟ್ನರ್ 30
ಖಾಲಿದ್ ಲತೀಫ್ ಸಿ ಎಲಿಯಟ್ ಬಿ ಸಾಂಟ್ನರ್ 3
ಉಮರ್ ಅಕ್ಮಲ್ ಸಿ ಗಪ್ಟಿಲ್ ಬಿ ಮಿಲ್ನೆ 24
ಶಾಹಿದ್ ಅಫ್ರಿದಿ ಸಿ ಆ್ಯಂಡರ್ಸನ್ ಬಿ ಸೋಧಿ 19
ಶುಐಬ್ ಮಲಿಕ್ ಔಟಾಗದೆ 15
ಸರ್ಫರಾಝ್ ಅಹ್ಮದ್ ಔಟಾಗದೆ 11
ಇತರ 9
ವಿಕೆಟ್ ಪತನ: 1-65, 2-79, 3-96, 4-123,5-140
ಬೌಲಿಂಗ್ ವಿವರ:
ಸಾಂಟ್ನರ್ 4-0-29-2
ಆ್ಯಂಡರ್ಸನ್ 2-0-14-0
ಮಿಲ್ನೆ 4-0-26-2
ಮೆಕ್ಲಿನಘನ್ 4-0-43-0
ಎಲಿಯಟ್ 2-0-16-0
ಐಶ್ ಸೋಧಿ 4-0-25-1.







