ಕಾಶ್ಮೀರದ ಜನತೆ ಪಾಕ್ ತಂಡವನ್ನು ಬೆಂಬಲಿಸಲು ಬಂದಿದ್ದಾರೆ : ಆಫ್ರಿದಿ

ಹೊಸದಿಲ್ಲಿ , ಮಾ. 22 : ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಆಫ್ರಿದಿ ಈ ಬಾರಿ ಕ್ರಿಕೆಟ್ ಗಿಂತ ಹೆಚ್ಚು ಇತರ ವಿಷಯಗಳಿಗೆ ಚರ್ಚೆಯಲ್ಲಿರಲು ನಿರ್ಧರಿಸಿದಂತಿದೆ. ಕಾಶ್ಮೀರದ ಜನತೆ ಪಾಕಿಸ್ತಾನ ತಂಡವನ್ನು ಬೆಂಬಲಿಸಲು ಮೊಹಾಲಿಗೆ ಬಂದಿದ್ದಾರೆ ಎಂದು ಮಂಗಳವಾರ ಹೇಳುವ ಮೂಲಕ ಹೊಸ ವಿವಾದವೊಂದಕ್ಕೆ ಆಫ್ರಿದಿ ನಾಂದಿ ಹಾಡಿದ್ದಾರೆ.
" ನ್ಯೂಜ್ಹಿಲ್ಯಾಂಡ್ ವಿರುದ್ಧದ ಪಂದ್ಯದ ಟಾಸ್ ಗೆ ಬಂದಾಗ ಮಾತನಾಡಿದ ಆಫ್ರಿದಿ " ಬಹಳಷ್ಟು ಜನರು ಕಾಶ್ಮೀರದಿಂದಲೂ ಬಂದಿದ್ದಾರೆ. ಕೊಲ್ಕತಾದ ಜನರಿಗೂ ಧನ್ಯವಾದ ಹೇಳ ಬಯಸುತ್ತೇನೆ " ಎಂದು ಹೇಳಿದರು.
ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ನ ಕ್ರೀಡಾಂಗಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿರುವ ಕುರಿತು ಕೇಳಿದ ಪ್ರಶ್ನೆಗೆ ಆಫ್ರಿದಿ ಹೀಗೆ ಉತ್ತರಿಸಿದರು.
ಟಿ 20 ವಿಶ್ವ ಕಪ್ ಆಡಲು ಭಾರತಕ್ಕೆ ಬಂದಿಳಿದ ಕೂಡಲೇ " ನಮಗೆ ಪಾಕಿಸ್ತಾನಕ್ಕಿಂತ ಹೆಚ್ಚು ಪ್ರೀತಿ ಭಾರತೀಯ ಕ್ರೀದಾಭಿಮಾನಿಗಳಿಂದ ಸಿಕ್ಕಿದೆ " ಎಂದು ಹೇಳಿದ ಆಫ್ರಿದಿ ವಿರುದ್ಧ ಪಾಕ್ ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು.





