ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ಪ್ರಕರಣ ; ಇಬ್ಬರು ಆರೋಪಿಗಳ ಸೆರೆ

ಬೆಂಗಳೂರು, ಮಾ.22: ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ 2013ರ ಎ.17ರಂದು ಬಾಂಬ್ ಸ್ಫೋಟ ನಡೆಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ರಾಜ್ಯದ ಸಿಸಿಬಿ ಪೊಲೀಸರು ತಮಿಳುನಾಡಿನ ತಿರುವಳ್ಳೂರಿನಲ್ಲಿ ಇಂದು ವಶಕ್ಕೆ ತೆಗೆದುಕೊಂಡಿದ್ದಾರೆ.
ಎಸಿಪಿ ಪ್ರಸನ್ನ ನೇತೃತ್ವದ ಸಿಸಿಬಿ ಪೊಲೀಸರು ತಿರುವಳ್ಳೂರಿನಲ್ಲಿ ವಶಕ್ಕೆ ತೆಗೆದುಕೊಳ್ಳುವಾಗ ಸ್ಥಳೀಯರಿಂದ ತೀವ್ರ ವಿರೋಧಿಸಬೇಕಾಯಿತು. ಕಾರ್ಯಾಚರಣೆಗೆ ಮಫ್ತಿಯಲ್ಲಿ ತೆರಳಿದ್ದ ಅವರನ್ನು ಪೊಲೀಸರೆಂದು ಸ್ಥಳೀಯರು ನಂಬಲಿಲ್ಲ.ಈ ಕಾರಣದಿಂದಾಗಿ ನಾಲ್ಕು ಗಂಟೆಗಳ ಸಿಸಿಬಿ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಸಮಸ್ಯೆ ಎದುರಿಸಿದರು.
ಸ್ಥಳಿಯರ ವಿರೋಧದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತಿರುವಳ್ಳೂರು ಪೊಲೀಸ್ ಠಾಣೆಗೆ ತೆರಳಬೇಕಾಯಿತು. ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಹರನ್ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿ ಮನವರಿಕೆ ಮಾಡಿದರು. ಬಳಿಕ ಸಿಸಿಬಿ ಪೊಲೀಸರ ವಶಕ್ಕೆ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳನ್ನು ನೀಡಲಾಯಿತು.
Next Story





