Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದನ-ಕರು ವ್ಯಾಪಾರಿಗಳ ಹತ್ಯೆ: ಅದೆಷ್ಟು...

ದನ-ಕರು ವ್ಯಾಪಾರಿಗಳ ಹತ್ಯೆ: ಅದೆಷ್ಟು ನ್ಯಾಯ ಸಮ್ಮತ?

ರಘೋತ್ತಮ ಹೊ.ಬ, ಮೈಸೂರುರಘೋತ್ತಮ ಹೊ.ಬ, ಮೈಸೂರು22 March 2016 11:37 PM IST
share
ದನ-ಕರು ವ್ಯಾಪಾರಿಗಳ ಹತ್ಯೆ: ಅದೆಷ್ಟು ನ್ಯಾಯ ಸಮ್ಮತ?

ಜಾತ್ರೆಯೊಂದಕ್ಕೆ ವ್ಯಾಪಾರ ಮಾಡಲು ಕೋಣಗಳನ್ನು ಒಯ್ಯುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಾಪಾರಿಗಳ ಹತ್ಯೆಯಾಗಿರುವ ಸುದ್ದಿ ದೂರದ ಜಾರ್ಖಂಡ್ ರಾಜ್ಯದ ಲಾತೇಹಾರ್ ಜಿಲ್ಲೆಯ ಗ್ರಾಮವೊಂದರಿಂದ ವರದಿಯಾಗಿದೆ. ಘಟನೆಯ ವರದಿಯಂತೆ, ದಾಳಿಕೋರರಿಂದ ತೀವ್ರವಾಗಿ ಹಲ್ಲೆಗೊಳಗಾದ ಇಬ್ಬರು ಜಾನುವಾರು ವ್ಯಾಪಾರಿಗಳ ಶವ ಮರವೊಂದರಲ್ಲಿ ನೇತಾಡುವ ಸ್ಥತಿಯಲ್ಲಿ ಪತ್ತೆಯಾಗಿರುವುದನ್ನು ನೋಡಿದರೆ ಘಟನೆಯ ಭೀಕರತೆ ಎಂಥವರಿಗಾದರೂ ಅರ್ಥವಾಗುತ್ತದೆ. ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಂತೆಯೇ ಮುಂದುವರಿದ ಅಸಹಿಷ್ಣುತೆ, ಆತಂಕ, ದೌರ್ಜನ್ಯದ ಕಥನಗಳನ್ನೂ ಇದು ಮತ್ತೊಮ್ಮೆ ಎತ್ತಿಹಿಡಿದಿದೆ.

ಹಾಗೆ ಮೂಡಿಬರುವ ಮೊದಲ ಪ್ರಶ್ನೆ ಎಂದರೆ ಜಾನುವಾರುಗಳನ್ನು (ದನ-ಕರು, ಎಮ್ಮೆ-ಕೋಣ) ಸದರಿ ಹತ್ಯೆಗೊಳಗಾದ ವ್ಯಕ್ತಿಗಳು ಮಾರಾಟಮಾಡಲು ತೆಗೆದು ಕೊಂಡು ಹೋಗುತ್ತಿದ್ದರು ಎಂದರೆ, ತಪ್ಪು ತೆಗೆದುಕೊಂಡು ಹೋಗುತ್ತಿದ್ದ ಆ ಇಬ್ಬರು ವ್ಯಾಪಾರಿಗಳದು ಮಾತ್ರವೇ? ಎಂಬುದು. ಈ ನಿಟ್ಟಿನಲ್ಲಿ ಸದರಿ ವ್ಯಾಪಾರಿಗಳಿಗೆ ದನಕರು ಗಳನ್ನು ಮಾರಾಟಮಾಡಿದ ರೈತರೂ ಕೂಡ ಈ ತಪ್ಪಿನಲ್ಲಿ ಪಾಲುದಾರರಲ್ಲವೇ? ಎಮ್ಮೆ ಅಥವಾ ಕೋಣ, ದನ ಅಥವಾ ಕರು ಬಡಕಲಾದ ತಕ್ಷಣ ಹಾಲುಕೊಡುವುದನ್ನು ನಿಲ್ಲಿಸಿದಾಕ್ಷಣ ಅದರಿಂದ ಉಪಯೋಗ ಕಡಿಮೆಯಾದಾಕ್ಷಣ ಅವುಗಳನ್ನು ಸಾಕಲು ಯಾವುದೇ ರೈತ ಮುಂದೆ ಬರುವುದಿಲ್ಲ. ಅವುಗಳನ್ನು ಸಾಕುವುದು ಆತನಿಗೆ ಲಾಭದಾಯಕ ಕೂಡ ಅಲ್ಲ. ಯಾಕೆಂದರೆ ಹೈನುಗಾರಿಕೆ ರೈತನಿಗೆ ಲಾಭ ತಂದು ಕೊಡುವ ಉಪಕಸುಬೇ ಹೊರತು ಅದು ಆತನ ಧರ್ಮಛತ್ರ ನಡೆಸುವ ಕಸುಬಲ್ಲ ಅಥವಾ ನಿರ್ದಿಷ್ಟ ಧರ್ಮದ ಸಂಕೇತವಾಗಿಯೂ ಕೂಡ ಆತ ಅವುಗಳನ್ನು ಸಾಕುವುದಿಲ್ಲ. ಅಕ್ಷರಶಃ ಹೇಳುವುದಾದರೆ ಆತ ಗೋಶಾಲೆಯನ್ನೇನು ನಡೆಸುವುದಿಲ್ಲ. ಈ ನಿಟ್ಟಿನಲ್ಲಿ ಅವುಗಳನ್ನು ಅಂದರೆ ನಿರುಪಯುಕ್ತ ಜಾನುವಾರುಗಳನ್ನು ಸದರಿ ರೈತ ಏನು ಮಾಡಬೇಕು? ತನ್ನ ಬದುಕಿಗಾಗಿ ಆತ ಅವುಗಳನ್ನು ಮಾರಲೇಬೇಕಲ್ಲವೇ? ಆಶ್ಚರ್ಯವೆಂದರೆ ಇಲ್ಲಿ ಜಾನುವಾರುಗಳನ್ನು ಖರೀದಿಸಿ ಮಾರುಕಟ್ಟೆಗೆ ಒಯ್ಯುವ ನಿರ್ದಿಷ್ಟ ಸಮುದಾಯದ ವ್ಯಾಪಾರಿಗಳನ್ನಷ್ಟೇ ಮಾತ್ರ ಗುರಿಯಾಗಿಸಿಕೊಳ್ಳಲಾಗುತ್ತದೆ. ಆದರೆ ಅದೇ ವ್ಯಾಪಾರಿಗೆ ಜಾನುವಾರು ಮಾರುವ ರೈತ ಮತ್ತು ಆತನ ಆರ್ಥಿಕ ಸಮಸ್ಯೆ ಇಲ್ಲಿ ಲೆಕ್ಕಕ್ಕೇ ಬರುವುದಿಲ್ಲ.

ಇನ್ನು ಎರಡನೆಯ ಪ್ರಶ್ನೆ ದನಕರುಗಳನ್ನು ಮಾರಾಟಮಾಡುವುದು ಬೇಡ. ಇರಲಿ, ಆ ರೈತ ನಷ್ಟ ಅನುಭವಿಸಲು ತಯಾರಾಗುತ್ತಾನೆ ಎಂದಿಟ್ಟುಕೊಳ್ಳೋಣ. ಪ್ರಶ್ನೆಯೇ ನೆಂದರೆ ಈ ಹಂತದಲ್ಲಿ ಸಾವಿಗೀಡಾಗುವ ದನ-ಕರುಗಳ ಸಮಾ ಮಾಡಲು ಸ್ಥಳ ಎಲ್ಲಿದೆ? ಮನುಷ್ಯರನ್ನು ಹೂಳಲೇ ಸ್ಮಶಾನ ಭೂಮಿಗಳಿಲ್ಲ. ಇದ್ದಬದ್ದ ಸ್ಮಶಾನಗಳೆಲ್ಲ ರಿಯಲ್ ಎಸ್ಟೇಟ್‌ನವರ ಹೊಡೆತಕ್ಕೆ ಸಿಲುಕಿ ನಿವೇಶನಗಳಾಗಿ ಪರಿವರ್ತಿತವಾಗುತ್ತಿವೆ. ಹೀಗಿರುವಾಗ ಸತ್ತ ದನಕರುಗಳನ್ನು ಹೂಳಲು ಸ್ಥಳ? ಒಟ್ಟಾರೆ ಗೋಹತ್ಯೆ ಬೇಡ. ಒಪೋಣ ಆದರೆ ಹಾಗೆ ಹೇಳುವವರು ಅದರ ಉಪಯೋಗ ಕಡಿಮೆಯಾದಾಕ್ಷಣ, ಹಾಲು ಕೊಡುವುದನ್ನು ನಿಲ್ಲಿಸಿದಾಕ್ಷಣ ಸದರಿ ನಿರುಪಯೋಗಿ ಜಾನುವಾರುಗಳಿಗಾಗಿ, ಅವುಗಳು ಬದುಕುವುದಕ್ಕಾಗಿ, ರೈತನಿಗೆ ಲಾಭ ನೀಡುವುದಕ್ಕಾಗಿಯೂ ಸಹಿತ, ಆತನಿಗೆ ಸೂಕ್ತ ಲಾಭದಾಯಕ ಬೆಲೆ ತೆತ್ತು ಅವುಗಳನ್ನು ಸಾಕುವ ವ್ಯವಸ್ಥೆ ನಿರ್ಮಿಸುವುದು ಬೇಡವೇ? ಎಂಬುದು. ಹಾಗೆಯೇ ಸೂಕ್ತ ಆ ವ್ಯವಸ್ಥೆಯಲ್ಲಿ ನಿರುಪಯುಕ್ತ ಅಥವಾ ರೋಗಗ್ರಸ್ತ ಆ ದನಕರುಗಳಿಗಾಗಿ ಸೂಕ್ತ ಆರೋಗ್ಯ ರಕ್ಷಣಾ ವ್ಯವಸ್ಥೆ, ಸೂಕ್ತ ಗೋ-ಸ್ಮಶಾನದ ವ್ಯವಸ್ಥೆ ಕೂಡ ಇರಬೇಕು ಮತ್ತು ಅದಕ್ಕೊಂದು ಸಕ್ರಿಯ ತಂಡ ಹಗಲು ಇರುಳು ಎನ್ನದೆ ಕಾರ್ಯನಿರ್ವಹಿಸಬೇಕು. ವಾಸ್ತವವೆಂದರೆ ಅಂತಹ ಕಾರ್ಯನಿರ್ವಹಣೆ, ನಿರುಪಯುಕ್ತ ದನಗಳನ್ನು-ಎಮ್ಮೆ-ಕೋಣಗಳನ್ನು ಸಾಕುವ ವ್ಯವಸ್ಥೆ ಪ್ರಸ್ತುತ ಹಳ್ಳಿಗಳಲ್ಲಿ ಎಲ್ಲಿದೆ? ವ್ಯತಿರಿಕ್ತವಾಗಿ ರೈತನಿಗೆ ಲಾಭ ನೀಡಿ ಅವುಗಳನ್ನು ಮಾರುಕಟ್ಟೆಗೆ ಒಯ್ಯುವವರನ್ನು ಹತ್ಯೆಗೈಯುವ ವ್ಯವಸ್ಥೆ ಅವ್ಯಾಹತವಾಗಿದೆ.

  ಮೂರನೆಯ ಪ್ರಶ್ನೆಯೊಂದನ್ನು ಇಲ್ಲಿ ಎತ್ತುವುದಾದರೆ, ದನ-ಕರು ಮಾಂಸವನ್ನು ನಿರ್ದಿಷ್ಟ ಜನಸಮುದಾಯ ಆಹಾರವಾಗಿ ಬಳಸುತ್ತದೆ. ಅಂದಹಾಗೆ ಹಾಗೆ ತಿನ್ನುವವರು ಯಾರೂ ಕೂಡ ಅದನ್ನು ಅದು ಇನ್ನೊಂದು ಧರ್ಮದ ಪೂಜ್ಯನೀಯ ಸಂಗತಿ, ಅವರ ಧರ್ಮದ ನಂಬಿಕೆಗೆ ಭಂಗ ತರಬೇಕು, ಆ ಕಾರಣಕ್ಕಾಗಿ ತಿನ್ನಬೇಕು ಎಂದು ತಿನ್ನುವುದಿಲ್ಲ. ಬದಲಿಗೆ ಅದು ಅವರ ಆಹಾರ ಅಭ್ಯಾಸವಷ್ಟೆ. ಮತ್ತೂ ಒಂದು ವಾಸ್ತವವೆಂದರೆ ಮಾರುಕಟ್ಟೆಯಲ್ಲಿ ಕುರಿ ಅಥವ ಆಡಿನ ಮಾಂಸ ತುಟ್ಟಿ. ಕುರಿ, ಆಡಿನ ಮಾಂಸ 400ರಿಂದ 450ರೂ. ಬೆಲೆ ಇದ್ದರೆ ದನದ ಮಾಂಸ 150ರಿಂದ 200 ರೂ.ಗೆ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಕುರಿ ಮತ್ತು ಆಡಿನ ಮಾಂಸದ ಬೆಲೆ ಜಾಸ್ತಿಯಾದ್ದರಿಂದ ಜನ ಅದಕ್ಕೆ ಪರ್ಯಾಯವಾಗಿ ದನ ಮತ್ತು ಎಮ್ಮೆಯ ಮಾಂಸ ಬಳಸುತ್ತಾರೆ. (ಕೋಳಿಮಾಂಸ ಕುರಿಮಾಂಸಕ್ಕೆ ಪರ್ಯಾಯವಾಗುವುದಿಲ್ಲ) ಈ ಹಿನ್ನೆಲೆಯಲ್ಲಿ ಕುರಿ ಮತ್ತು ಆಡಿನ ಮಾಂಸಕ್ಕೆ ಪರ್ಯಾಯವಾಗಿ ದನ ಮತ್ತು ಎಮ್ಮೆಯ ಮಾಂಸ ಬಳಕೆ ನಿಲ್ಲಿಸಲು ಹಾಗೆ ಹಲ್ಲೆ ಮಾಡುವವರು, ಹತ್ಯೆ ಮಾಡುವವರು ಮತ್ತು ಅಂತಹ ಮನಸ್ಥಿತಿಯವರು ಗೋಸಂತತಿಯ ರಕ್ಷಣೆಯ ದೂರದೃಷ್ಟಿಯಿಂದ ಕುರಿ ಮತ್ತು ಆಡಿನ ಮಾಂಸವನ್ನು ಅಗ್ಗದ ಬೆಲೆಗೆ(150ರಿಂದ 200ರೂ. ಬೆಲೆಗೆ) ಪೂರೈಸಲು ಕ್ರಮಕೈಗೊಳ್ಳುವುದಿಲ್ಲವೇಕೆ? ಎಂಬುದು.

ಈ ನಿಟ್ಟಿನಲ್ಲಿ ಇನ್ನೊಬ್ಬರ ಆಹಾರ ಪದ್ಧತಿ ಗೌರವಿಸದಿದ್ದರೂ ಪರವಾಗಿಲ್ಲ, ಗೋಸಂತತಿ ಉಳಿಸಲು ಹಾಗೆ ಗೋರಕ್ಷಣೆ ಮಾಡುವವರು ಅದರ ನೈಜ ರಕ್ಷಣೆಗೆ ಮುಂದಾಗಬೇಕು. ಗೋಮಾಂಸ ಸಾಗಿಸುವವರ ಮೇಲೆ, ದನಕರುಗಳ ವ್ಯಾಪಾರಿಗಳ ಮೇಲೆ, ಗೋಮಾಂಸ ಇಟ್ಟುಕೊಳ್ಳುವವರ ಮೇಲೆ ಹಲ್ಲೆ ನಡೆಸುವ ಬದಲು, ಹತ್ಯೆ ನಡೆಸುವ ಬದಲು ಗೋವನ್ನು ರಕ್ಷಿಸುವ ಪರ್ಯಾಯ ವಿಧಾನಗಳ ಬಗ್ಗೆ ಮೇಲೆ ಹೇಳಿದ ರೀತಿ ಆಲೋಚಿಸಬೇಕು. ಮುಖ್ಯವಾಗಿ ಗೋವನ್ನು ಸಾಕುವ ರೈತರ ಮಾಹಿತಿ ಸಂಗ್ರಹಣೆ, ಅವರಿಂದ ನಿರುಪಯುಕ್ತ ಗೋವುಗಳ ಸಂಗ್ರಹಣೆ, ಅವುಗಳಿಗಾಗಿ ಸೂಕ್ತ ವಾಸಸ್ಥಳ, ಸ್ಮಶಾನ, ಅವು ಸಾಯುವವರೆಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವುದು, ಅವುಗಳ ಹಾರೈಕೆ, ವೈದ್ಯೋಪಚಾರ... ಎಲ್ಲವೂ ನಡೆಯಬೇಕು. ಹಾಗೆ ದನ ಮತ್ತು ಕೋಣ ತಿನ್ನುವವರಿಗೆ ಅಗ್ಗದ ದರದಲ್ಲಿ ಕುರಿ ಮಾಂಸ ಪೂರೈಕೆಯೂ ನಡೆಯಬೇಕು. ಈ ನಿಟ್ಟಿನಲ್ಲಿ ಗೋರಕ್ಷಣೆ ಎಂದರೆ ಅದು ಈ ಮಾರ್ಗದಲ್ಲಿ ನಡೆಯಬೇಕು. ಆಗ ಅದು ಕಾಳಜಿಪೂರ್ಣ ನಡೆಯಾಗುತ್ತದೆ. ಅದು ಬಿಟ್ಟು ಗೊಮಾಂಸ ಇಟ್ಟುಕೊಳ್ಳುವವರನ್ನು ಹತ್ಯೆಗೈಯುವುದು, ಅದನ್ನು ಸಾಗಿಸುವವರನ್ನು ಹತ್ಯೆಗೈಯುವುದು, ಅದನ್ನು ಮಾರಾಟ ಮಾಡುವವರ ಮೇಲೆ ಹಲ್ಲೆ ಮಾಡುವುದು, ಇದು ಯಾವ ಸೀಮೆಯ ನ್ಯಾಯ? ಖಂಡಿತ ಅದು ಗೋವಿನ ರಕ್ಷಣೆಗಿಂತ ಗೋವನ್ನು ತಿನ್ನುವ ನಿರ್ದಿಷ್ಟ ಜನಸಮುದಾಯದ ಮೇಲಿನ ದ್ವೇಷದಂತೆ ಭಾಸವಾಗುತ್ತದೆ.

ಖಂಡಿತ, ಇಂತಹ ದ್ವೇಷ, ಹತ್ಯೆ ಅದು ಪ್ರಜಾಪ್ರಭುತ್ವದ ಸೂಕ್ತ ಲಕ್ಷಣವಾಗುವುದಿಲ್ಲ. ಹಾಗೆಯೇ ಮಾನವೀಯ ಮೌಲ್ಯದ್ದೂ ಕೂಡ ಅದು ಆಗುವುದಿಲ್ಲ. ದೇಶದ ಸಾಮರಸ್ಯ-ಐಕ್ಯತೆಯ ದೃಷ್ಟಿಯಿಂದಲೂ ಕೂಡ ಅದು ಸಹಮತದ್ದಾಗುವುದಿಲ್ಲ. ಯಾಕೆಂದರೆ ಭಾರತದ ಸಂವಿಧಾನ ಪ್ರತಿಯೊಬ್ಬನಿಗೂ ಸ್ವಾತಂತ್ರ್ಯ- ಸಮಾನತೆ- ಸಹೋದರತೆಯಿಂದ ಬದುಕುವುದನ್ನು ಹೇಳುತ್ತದೆ. ತಪ್ಪು ಮಾಡಿದರೆ ಅದಕ್ಕೆ ದಂಡನೆಯ ಅವಕಾಶವನ್ನು ಕೂಡ ಸಂವಿಧಾನ ನೀಡುತ್ತದೆ. ಹಲ್ಲೆಮಾಡಿ, ಹತ್ಯೆ ಮಾಡಿ ಎಂದು ಅದು ಹೇಳುವುದಿಲ್ಲ. ಪರಸ್ಪರ ಐಕ್ಯಮತ್ಯ, ಪರಸ್ಪರ ನಂಬಿಕೆಗಳನ್ನು ಗೌರವಿಸುವುದು ಅದು ಸಂವಿಧಾನದ ಆಶಯ. ಸಮಸ್ಯೆಗಳಿದ್ದರೆ ಅದಕ್ಕೆ ಪರಿಹಾರ ಕೂಡ ಈ ದೇಶದ ಆಡಳಿತ ವ್ಯವಸ್ಥೆಯಲ್ಲಿದೆ. ಹೀಗಿರುವಾಗ ದನ-ಕರು ಮಾರಾಟ, ಸಾಗಾಟದ ಹಿನ್ನೆಲೆಯಲ್ಲಿ ಹತ್ಯೆ ನಡೆಯುವುದು?
ನಿಜಕ್ಕೂ ನಿರ್ದಿಷ್ಟ ಜನಸಮುದಾಯದ ಮೇಲೆ ನಡೆಯುವ ಇಂತಹ ಹಲ್ಲೆ ಸರ್ವತ್ರ ಖಂಡನೀಯ. ಅಸ್ಪಶ್ಯರ ಮೇಲೆ ಹೇಗೆ ಜಾತಿಯ ಕಾರಣಕ್ಕಾಗಿ ಹಲ್ಲೆ ನಡೆಯುತ್ತದೆಯೋ, ಹತ್ಯೆಯಾಗುತ್ತದೆಯೋ ಹಾಗೆ ಇದೂ ಕೂಡ ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ನಿಟ್ಟಿನಲ್ಲಿ ಅಸ್ಪಶ್ಯರಿಗಾಗಿ ಇರುವ ದೌರ್ಜನ್ಯ ತಡೆ ಕಾಯ್ದೆ ಮಾದರಿ ಕಾಯ್ದೆಯನ್ನು ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯದ ಪರವಾಗಿಯೂ ಏಕೆ ಜಾರಿಮಾಡಬಾರದು ಎಂಬ ಪ್ರಶ್ನೆಯೂ ಕೂಡ ಇಲ್ಲಿ ಉದ್ಭವಿಸುತ್ತದೆ. ಈ ದೇಶ, ಈ ನಾಡು, ಈ ಭೂಮಿ ಯಾರ ವಯಕ್ತಿಕ ಆಸ್ತಿಯೂ ಅಲ್ಲ. ಸಕಲ ಮಾನವರಿಗೂ ಸೇರಿದ್ದು ಇದು. ಈ ಹಿನ್ನೆಲೆಯಲ್ಲಿ ಎಲ್ಲರೂ ಇಲ್ಲಿ ಗೌರವಯುತವಾಗಿ ಬದುಕುವಂತಾಗಬೇಕು. ಅಂತಹ ವಾತಾವರಣ ವ್ಯವಸ್ಥೆಯೊಳಗೆ ನಿರ್ಮಾಣವಾಗಬೇಕು. ಗೋರಕ್ಷಣೆಯ ಹೆಸರಿನಲ್ಲಿ ಇನ್ನು ಮುಂದಾದರೂ ಹಲ್ಲೆ, ಹತ್ಯೆಗಳಂತಹ ಕೃತ್ಯಗಳು ನಿಲ್ಲಬೇಕು. ಸಕಲರೂ ಸಹೋದರತೆಯಿಂದ ಬಾಳುವಂತಾಗಬೇಕು ಎಂಬುದೇ ಸದ್ಯದ ಕಳಕಳಿ.

ಗೋರಕ್ಷಣೆಯು ಕಾಳಜಿಪೂರ್ಣವಾಗಿ ನಡೆಯಬೇಕು. ಅದು ಬಿಟ್ಟು ಗೊಮಾಂಸ ಇಟ್ಟುಕೊಳ್ಳುವವರನ್ನು, ಅದನ್ನು ಸಾಗಿಸುವವರನ್ನು, ಅದನ್ನು ಮಾರಾಟ ಮಾಡುವವರನ್ನು ಹತ್ಯೆಗೈಯುವುದು ಯಾವ ಸೀಮೆಯ ನ್ಯಾಯ? ಖಂಡಿತ ಇದು ಗೋವಿನ ರಕ್ಷಣೆಗಿಂತ ಗೋವನ್ನು ತಿನ್ನುವ ನಿರ್ದಿಷ್ಟ ಜನಸಮುದಾಯದ ಮೇಲಿನ ದ್ವೇಷದಂತೆ ಭಾಸವಾಗುತ್ತದೆ.

share
ರಘೋತ್ತಮ ಹೊ.ಬ, ಮೈಸೂರು
ರಘೋತ್ತಮ ಹೊ.ಬ, ಮೈಸೂರು
Next Story
X