ಎ.6ರಿಂದ ಕಥಕ್ ನೃತ್ಯ
ಬೆಂಗಳೂರು, ಮಾ.22: ನವದುರ್ಗ ಟ್ರಸ್ಟ್ ಫಾರ್ ಇಂಡಾಲಜಿ ಸ್ಟಡೀಸ್ ಅಂಡ್ ರೀಸರ್ಚ್ ವತಿಯಿಂದ ಎ.6 ಮ್ತು 7 ರಂದು ಕಥಕ್‌ನೃತ್ಯವನ್ನು ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥೆ ಬಿ.ಆರ್.ಭಾರತಿ, ಕಾರ್ಯಕ್ರಮವು ಎ.6 ರಂದು ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಮತ್ತು 6 ಮತ್ತು 7 ರಂದು ದಯಾನಂದ ಸಾಗರ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದರು.
ಒಂದೇ ಸೂರಿನಡಿ ಸಮಗ್ರ ಭಾರತವನ್ನು ಕಟ್ಟಿಕೊಡುವ ಪ್ರಯತ್ನದಿಂದಾಗಿ ‘ಇಂಡಿಯಾಲಜಿಕಲ್ ಮ್ಯೂಸಿಯಂ’ನ್ನು ರೂಪಿಸಲಾಗಿದೆ. ಇದಕ್ಕಾಗಿ ದೇಣಿಗೆಯನ್ನು ಸಂಗ್ರಹಿಸುವ ಉದ್ದೇಶದಿಂದ ಖ್ಯಾತ ಕಲಾವಿದೆ ನಿರುಪಮಾ ರಾಜೇಂದ್ರ ತಂಡದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
Next Story