ಯಂಗ್ ಫ್ರೆಂಡ್ಸ್ ಉರ್ವ ತಂಡಕ್ಕೆ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಟ್ರೋಫಿ

ಮಂಗಳೂರು, ಮಾ.22: ಜೆಪ್ಪು ಮಹಾಕಾಳಿ ಪಡ್ಪು ಮೈದಾನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ. ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಟ್ರೋಫಿ ಯನ್ನು ಯಂಗ್ ಫ್ರೆಂಡ್ಸ್ ಉರ್ವ ತಂಡ ಗೆದ್ದುಕೊಂಡಿದೆ. ದ್ವಿತೀಯ ಸ್ಥಾನ ಜೆಪ್ಪುಆದಿ ಮಹೇಶ್ವರಿ ಕ್ರಿಕೆಟರ್ಸ್ ಗಳಿಸಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬಹುಮಾನವನ್ನು ವಿತರಿಸಿ ಮಾತನಾಡಿದರು. ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಕಾರ್ಪೊರೇಟರ್ ಶೈಲಜಾ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ಮೋಹನ್ ಮೆಂಡನ್, ಅಬೂಬಕರ್, ಮುಹಮ್ಮದ್ ನವಾಝ್, ಅನಿವಾಸಿ ಉದ್ಯಮಿ ಇಕ್ಬಾಲ್, ಭಾಸ್ಕರ್ ರಾವ್, ದಿನೇಶ್ ಪಿ.ಎಸ್. ಶಮೀಮ್, ಲತೀಫ್, ಮಾಶೂಕ್, ರಾಯಿಲ್ ಮೊದಲಾದವರು ಉಪಸ್ಥಿತರಿದ್ದರು. ಈ ಪಂದ್ಯಾಟವನ್ನು ಅತ್ತಾವರ ವಾರ್ಡ್ ಯುವ ಕಾಂಗ್ರೆಸ್ ಸಮಿತಿ ಹಾಗೂ ಯು2 ಸ್ಪೋರ್ಟ್ಸ್ ಜೆಪ್ಪು ಕ್ಲಬ್ ಆಯೋಜಿಸಿದ್ದರು.
ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಯಂಗ್ ಫ್ರೆಂಡ್ಸ್‌ನ ಅಶ್ವಿನ್, ಟೂರ್ನಮೆಂಟ್ ಆಟಗಾರ ಪ್ರಶಸ್ತಿಯನ್ನು ಆದಿ ಮಹೇಶ್ವರಿ ತಂಡದ ಕಮಲ್, ಬೆಸ್ಟ್ ಬ್ಯಾಟ್ಸ್‌ಮ್ಯಾನ್ ಪ್ರಶಸ್ತಿ ಯನ್ನು ಯಂಗ್ ಫ್ರೆಂಡ್ಸ್‌ನ ಝುಬೈರ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಯಂಗ್ ಫ್ರೆಂಡ್ಸ್‌ನ ಪವಾಝ್ ಪಡೆದುಕೊಂಡರು.





