ಪೆರ್ಡೂರು: ರಸ್ತೆ ಕಾಮಗಾರಿಗೆ ಶಿಲಾನ್ಯಾಸ

ಉಡುಪಿ, ಮಾ.22: ಕಾಪು ವಿಧಾನಸಭಾ ಕ್ಷೇತ್ರದ ಪೆರ್ಡೂರು ಗ್ರಾಪಂನ ಪಾಡಿಗಾರ-ಖಜಾನೆ ರಸ್ತೆ ಕಾಮಗಾರಿಗೆ ಇತ್ತೀಚೆಗೆೆ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಶಿಲಾನ್ಯಾಸ ನೆರವೇರಿಸಿದರು. ಮಾಜಿ ಪಂಚಾಯತ್ ಸದಸ್ಯ ಶ್ರೀಪಾದ ರೈ ಸ್ವಾಗತಿಸಿದರು. ವಸಂತಕುಮಾರ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಭಾಧ್ಯಕ್ಷತೆಯನ್ನು ಸುಧಾಕರ ಶೆಟ್ಟಿ ಎಂ. ವಹಿಸಿದ್ದರು. ಶಾಂತರಾಮ ಸೂಡಾ, ಉಮೇಶ್ ನಾಯಕ್, ಬಿ. ಬಿ. ಪೂಜಾರ್, ವಸಂತಕುಮಾರ್ ಶೆಟ್ಟಿ, ಗೀತಾ ಪೂಜಾರಿ, ಶಾಂತಾ ಎಸ್. ಶೆಟ್ಟಿ, ಯೋಗೀಶ್ ಕುಮಾರ್, ಲೋಕೋಪಯೋಗಿ ಇಲಾಖೆಯ ಉದಯ ಶೆಟ್ಟಿ ಉಪಸ್ಥಿತರಿದ್ದರು. ಸಂತೋಷ್ ಹೆಗಡೆ ವಂದಿಸಿದರು.
Next Story





