ಅಫ್ಘಾನಿಸ್ತಾನದ ಕೋಚ್ ಆಗಿದ್ದಕ್ಕೆ ಹೆಮ್ಮೆ: ಇಂಝಮಮ್

ಹೊಸದಿಲ್ಲಿ, ಮಾ.22:‘‘ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ಹಾಗೂ ಸ್ಕಾಟ್ಲೆಂಡ್‌ಗಳಂತಹ ಉತ್ತಮ ತಂಡಗಳನ್ನು ಮಣಿಸಿ ಸೂಪರ್-10ಕ್ಕೆ ತಲುಪಿ ಸ್ಫೂರ್ತಿಯುತ ಪ್ರದರ್ಶನ ನೀಡುತ್ತಿರುವ ಅಫ್ಘಾನಿಸ್ತಾನಕ್ಕೆ ಕೋಚ್ ಆಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ’’ ಎಂದು ಇಂಝಮಮ್ ಉಲ್ ಹಕ್ ಹೇಳಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕ ಇಂಝಮಮ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದರು.
‘‘ಅಫ್ಘಾನಿಸ್ತಾನದ ಪ್ರದರ್ಶನದ ಬಗ್ಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುವುದನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ಹುಡುಗರು ಕಠಿಣ ಶ್ರಮ ಪಡುತ್ತಿದ್ದಾರೆ. ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಅವರಿಗೆ ಇನ್ನಷ್ಟು ಆಡುವ ಅವಕಾಶ ಸಿಗಬೇಕಾಗಿದೆ. ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದರೆ ಮತ್ತಷ್ಟು ಬೆಳೆಯಬಹುದು’’ ಎಂದು ಪಾಕ್ ಬ್ಯಾಟಿಂಗ್ ದಂತಕತೆ ಇಂಝಮಮ್ ತಿಳಿಸಿದ್ದಾರೆ.
Next Story





