ಇಬ್ಬರು ದಲಿತರ ಗುಂಡಿಕ್ಕಿ ಹತ್ಯೆ
ಬೇಗುಸರಾಯ್,ಮಾ.22: ಬಿಹಾರದ ಬೇಗುಸರಾಯ್ ಜಿಲ್ಲೆಯ ಬಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಮಸುದನ್ಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ದಲಿತ ಯುವಕರಿಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಲಖನ್ ರಾಮ (29) ಮತ್ತು ಮಹೇಶ ರಾಮ(26) ಕೊಲೆಯಾಗಿರುವ ವ್ಯಕ್ತಿಗಳು ಎಂದು ಎಸ್‌ಪಿ ಮನೋಜ್ ಕುಮಾರ್ ತಿಳಿಸಿದರು.
ಭೂ ವಿವಾದ ಈ ಜೋಡಿಕೊಲೆಗೆ ಕಾರಣವೆಂದು ಶಂಕಿಸಲಾಗಿದೆ.
Next Story





