ಬಾಂಗ್ಲಾದೇಶ ವಿರುದ್ಧ ಭರ್ಜರಿ ಬ್ಯಾಟಿಂಗ್ಗೆ ಧೋನಿ ಕರೆ
ಬೆಂಗಳೂರು, ಮಾ.22: ‘‘ನೆಟ್ ರನ್‌ರೇಟ್ ಹೆಚ್ಚಿಸುವ ಸಲುವಾಗಿ ಆಟಗಾರರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವತ್ತ ಗಮನ ನೀಡಬೇಕು’’ ಎಂದು ಭಾರತದ ನಾಯಕ ಎಂಎಸ್ ಧೋನಿ ಸಲಹೆ ನೀಡಿದ್ದಾರೆ.
‘‘ನಮಗೆ ಈಗಲೂ ಉತ್ತಮ ಪ್ರದರ್ಶನ ನೀಡುವ ಅವಕಾಶವಿದೆ. ಮುಂಬರುವ ಎರಡು ಪಂದ್ಯಗಳು ನಮ್ಮ ಪ್ರಮುಖ ಆದ್ಯತೆಯಾಗಿದೆ. ಮೊದಲ ಪಂದ್ಯದಲ್ಲಿ ನಮ್ಮ ರನ್‌ರೇಟ್ ಕುಸಿದಿತ್ತು. ಮುಂದಿನ ಪಂದ್ಯದಲ್ಲಿ ಕೇವಲ ಗೆಲುವು ಮಾತ್ರವಲ್ಲ ರನ್‌ರೇಟ್ ಹೆಚ್ಚಿಸುವತ್ತಲೂ ಗಮನ ಹರಿಸಬೇಕಾಗಿದೆ’’ ಎಂದು ಧೋನಿ ಹೇಳಿದ್ದಾರೆ.
ಸೂಪರ್-10ರ ಮೊದಲ ಪಂದ್ಯದಲ್ಲಿ ಕಿವೀಸ್ ವಿರುದ್ಧ 47 ರನ್ ಅಂತರದಿಂದ ಸೋತಿರುವ ಭಾರತ ತಂಡ ಪಾಕ್ ವಿರುದ್ಧ ಮಳೆ ಬಾಧಿತ ಪಂದ್ಯದಲ್ಲಿ ಜಯ ಸಾಧಿಸಿತ್ತು. 2 ಅಂಕವನ್ನು ಗಳಿಸಿರುವ ಭಾರತ ಮುಂದಿನ ಹಂತಕ್ಕೇರಲು ರನ್‌ರೇಟ್ ಪ್ರಮುಖ ಪಾತ್ರವಹಿಸಲಿದೆ.
Next Story





