"ಮೋದಿ ದೇವರ ವರ" ಹೊಗಳಿಕೆ: ಆರ್‌ಎಸ್‌ಎಸ್‌ಗೆ ಕಸಿವಿಸಿ

ಹೊಸದಿಲ್ಲಿ, ಮಾ. 23: "ಮೋದಿ ಭಾರತಕ್ಕೆ ದೇವರು ಕೊಟ್ಟ ವರ" ಎಂದು ಬಿಜೆಪಿ ನಾಯಕರು ಹೊಗಳಿರುವುದು ಆರ್‌ಎಸ್‌ಎಸ್ ಕೆಂಗಣ್ಣಿಗೆ ಕಾರಣವಾಗಿದೆ.
ರಾಜಸ್ಥಾನದ ನಾಗೂರ್‌ನಲ್ಲಿ ಇತ್ತೀಚೆಗೆ ನಡೆದ ಆರ್‌ಎಸ್‌ಎಸ್ ಪ್ರತಿನಿಧಿ ಸಭೆಯ ಬಳಿಕ, ಮಂಗಳವಾರ ಆರ್‌ಎಸ್‌ಎಸ್ ವರಿಷ್ಠರು ಬಿಜೆಪಿ ಮುಖಂಡರ ಜತೆ ಚರ್ಚೆ ನಡೆಸಿದರು.
ಇದು ಸಭೆಯ ಫಲಿತಾಂಶಗಳ ಬಗ್ಗೆ ಪಕ್ಷಕ್ಕೆ ಮಾಹಿತಿ ನೀಡುವ ಔಪಚಾರಿಕ ಸಭೆಯಾಗಿತ್ತು" ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.
ಪಕ್ಷದ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಇತರ ಮುಖಂಡರಿಗೆ ರಾಷ್ಟ್ರೀಯತೆಯ ವಿಚಾರ ಮುಂದುವರಿಸುವ ಜತೆಗೆ ಅಭಿವೃದ್ಧಿಯ ಕಡೆಗೂ ಗಮನ ಕೊಡುವಂತೆ ಕೇಸರಿ ಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
ಕೇಂದ್ರ ಸಚಿವ ವೆಂಕಯ್ಯನಾಯ್ಡು, ಮೋದಿಯನ್ನು ದೇವರ ವರ ಎಂದದು ಬಣ್ಣಿಸಿರುವ ಬಗ್ಗೆಯೂ ಅಸಂತೋಷ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ. ವ್ಯಕ್ತಿಪೂಜೆಗಿಂತ ಸಂಘಟನೆ ಶ್ರೇಷ್ಠ ಎಂಬ ಸಂದೇಶವನ್ನು ರವಾನಿಸಿದೆ.
Next Story





