ಕಲಬುರುಗಿ ಸೆಂಟ್ರಲ್ ಜೈಲಿನಿಂದ ನಾಲ್ವರು ಕೈದಿಗಳು ಎಸ್ಕೇಪ್

ಕಲಬುರುಗಿ, ಮಾ.23: ಕಲಬುರುಗಿ ಸೆಂಟ್ರಲ್ ಜೈಲಿನಿಂದ ಮಂಗಳವಾರ ತಡರಾತ್ರಿ ನಾಲ್ವರು ವಿಚಾರಾಣಾಧೀನ ಕೈದಿಗಳು ಪರಾರಿಯಾಗಿದ್ದಾರೆ.
ರಾತ್ರಿ 1ರಿಂದ 2 ಗಂಟೆಯ ಅವಧಿಯಲ್ಲಿ ವಿಚಾರಾಣಾಧೀನ ಕೈದಿಗಳಾದ ಲಕ್ಷ್ಮಣ್, ಶಿವಕುಮಾರ‍್, ಸುನೀಲ್ ಮತ್ತು ತಾಜುದ್ದೀನ್ ಎಂಬವರು ಸಿನೀಮಿಯಾ ರೀತಿಯಲ್ಲಿ ಪರಾರಿಯಾಗಿದ್ದಾರೆ.
ಪರಾರಿಯಾದ ಒಂದು ಗಂಟೆಯ ಬಳಿಕ ಪೊಲೀಸರಿಗೆ ಗೊತ್ತಾಗಿದೆ ಮೂಲಗಳು ತಿಳಿಸಿವೆ. ಪರಾರಿಯಾದ ಕೈದಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಈಶಾನ್ಯ ವಲಯ ಐಜಿಪಿ ಬಿ. ಶಿವಕುಮಾರ್ ತಿಳಿಸಿದ್ದಾರೆ
Next Story





