ವಿಧಾನ ಸೌಧದ ಮೂರನೆ ಮಹಡಿಯಲ್ಲಿ ದಟ್ಟ ಹೊಗೆ

ಬೆಂಗಳೂರು, ಮಾ.23: ವಿಧಾನ ಸೌಧದ ಮೂರನೆ ಮಹಡಿಯಲ್ಲಿ ಇಂದು ಬೆಳಗ್ಗೆ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.
ಸಚಿವ ಎಂಬಿ ಪಾಟೀಲ್ ಕಚೇರಿ ಪಕ್ಕದಲ್ಲಿರುವ ಅರ್ಜಿ ಸೀಕೃತಿ ಮತ್ತು ರವಾನೆ ಕೊಠಡಿಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಸಿಬ್ಬಂದಿಗಳು ಭಯಭೀತರಾಗಿ ಕಟ್ಟದಿಂದ ಹೊರ ಬಂದಿದ್ದಾರೆ.
ಸಿಪಿಒ ಓವರ‍್ ಹೀಟ್ ಆಗಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
Next Story





