ಎ 2 ರಿಂದ 16 ರವರೆಗೆ ಅಗ್ರಹಾರ ಉರೂಸ್
ವಿಟ್ಲ, ಮಾ.23: ನಾವೂರು-ಅಗ್ರಹಾರ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ವಲಿಯುಲ್ಲಾಹಿ (ಖ.ಸಿ) ಅವರ ಹೆಸರಿನಲ್ಲಿ ಆಚರಿಸಿಕೊಂಡು ಬರುತ್ತಿರುವ ಅಗ್ರಹಾರ ಉರೂಸ್ ಕಾರ್ಯಕ್ರಮವು ಎ 2 ರಿಂದ 16 ರವರೆಗೆ ನಡೆಯಲಿದೆ.
ಎ 16 ರಂದು ರಾತ್ರಿ ನಡೆಯುವ ಉರೂಸ್ ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಉದ್ಘಾಟಿಸಲಿದ್ದು, ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು.
ಸಯ್ಯಿದ್ ಅಹ್ಮದ್ ಶಫೀಕ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುವಾಶಿರ್ವಚನಗೈಯುವರು. ಮಲಾರ್ ಜುಮಾ ಮಸೀದಿ ಖತೀಬ್ ಉಬೈದುಲ್ಲಾ ಅರ್ಹರಿ ಮುಖ್ಯ ಭಾಷಣಗೈಯುವರು.
ಅದೇ ದಿನ ಸಂಜೆ ನಡೆಯುವ ಗಣ್ಯರ ಸಮಾವೇಶವನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು. ಮಸೀದಿ ಅಧ್ಯಕ್ಷ ಎಂ. ಯೂಸುಫ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಜಿ.ಪಂ. ಸದಸ್ಯರಾದ ಬಿ. ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಪುರಸಭಾ ಸದಸ್ಯ ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್. ಖಾದರ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಮೊದಲಾದವರು ಭಾಗವಹಿಸುವರು.
ಈ ಪ್ರಯುಕ್ತ ನಡೆಯುವ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ನೌಫಲ್ ಕೌಶರಿ ಆಲಂಪಾಡಿ, ಕಾಸಿಂ ದಾರಿಮಿ ಕಿನ್ಯ, ಜಲೀಲ್ ಸಖಾಫಿ ಕೊಲಾಂಡಿ, ಅಶ್ಫಕ್ ಫೈಝಿ ಸಜಿಪನಡು ಉಪನ್ಯಾಸ ನೀಡುವರು ಎಂದು ಮಸೀದಿ ಪ್ರಕಟಣೆ ತಿಳಿಸಿದೆ.







