ಸುಪ್ರೀಮ್ ಬಜಾಜ್ ಅವರಿಂದ 'ಬಜಾಜ್ ವಿ' ನೂತನ ಬೈಕ್ ಅನಾವರಣ

ಮಂಗಳೂರು, ಮಾ.23: ಬಜಾಜ್ ಮೋಟಾರ್ ಸೈಕಲ್ ನ ನೂತನ ಬೈಕ್ ' ಬಜಾಜ್ ವಿ' ಅನ್ನು ಇಂದು ಮಂಗಳೂರಿನಲ್ಲಿ ಸುಪ್ರೀಮ್ ಅಟೋ ಡೀಲರ್ಸ್ ನವರು ಬೆಂದೂರಿನ ಸೈಂಟ್ ಸಬಸ್ಟಿಯನ್ ಅಡಿಟೋರಿಯಮ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಂಗಳೂರು ಎನ್ ಸಿ ಸಿ ನೇವಲ್ ಯುನಿಟ್ ನ ಕಮಾಂಡಿಂಗ್ ಆಫಿಸರ್ ಕ್ಯಾ. ಎಂ.ಸಿ. ಬೆಳ್ಳಿಯಪ್ಪ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಅವರು 23 ಗ್ರಾಹಕರಿಗೆ ಬೈಕ್ ನ ಕೀ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ಪ್ರಜೆಗಳು ವಿಮಾನ ವಾಹಕ ಯುದ್ಧ ನೌಕೆ ಐಎನ್ ಎಸ್ ವಿಕ್ರಾಂತ್ ನ ಲೋಹವನ್ನು ಹೊಂದಿರುವ ಹಾಗೂ ಯುದ್ಧ ನೌಕೆಯಿಂದ ತಯಾರಿಸಿದ ವಿಶ್ವದ ಏಕೈಕ ಬೈಕ್ ಗೆ ಮಾಲಿಕರಾಗುವ ಅವಕಾಶ ಹೊಂದಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಸುಪ್ರೀಮ್ ಅಟೋ ಡೀಲರ್ಸ್ ಪ್ರೈವೆಟ್ ಲಿಮಿಟೆಡ್ ನ ಎಂ.ಡಿ. ಆರೂರು ಅರ್ಜುನ್ ರಾವ್, ಡಿಜಿಎಂ ಸುದರ್ಶನ್ ಭಟ್, ಬಜಾಜ್ ಅಟೋ ಏರಿಯಾ ಸೇಲ್ಸ್ ಮ್ಯಾನೇಜರ್ ಫೆಬಿನ್ ಕೋಯನ್, ಎಚ್ ಆರ್ ಮುಖ್ಯಸ್ಥರು ರೋನಾಲ್ಡ್ ಸಿಕ್ವೇರಾ ಹಾಗೂ ಇತರರು ಉಪಸ್ಥಿತರಿದ್ದರು.
Next Story





