ದಿವಂಗತ ಎಚ್. ನಾರಾಯಣ ಸನಿಲ್ ಅವರ ನೆನಪು ಕಾರ್ಯಕ್ರಮ

ಮುಲ್ಕಿ, ಮಾ.23: ಹಳೆಯಂಗಡಿ ಎಚ್. ನಾರಾಯಣ್ ಸನಿಲ್‌ರವರು ತಮ್ಮ ಜೀವಮಾನದ ಉದ್ದಕ್ಕೂ ಯಾವುದೇ ಜಾತಿಯೊಂದಿಗೆ ಅಂತರವನ್ನು ಇಟ್ಟುಕೊಳ್ಳದೆ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿ ಸಮಾಜದ ಏಳಿಗೆಯೊಂದಿಗೆ ಹಳೆಯಂಗಡಿಯ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡವರು. ಇಂತವರ ಜೀವನ ಶೈಲಿಯನ್ನು ಯುವಜನತೆ ಅನುಸರಿಸಿದರೆ ಸಮಾಜದ ಏಳಿಗೆ ಸಾಧ್ಯ ಎಂದು ಕರ್ನಾಟಕ ಸರಕಾರದ ಮಾಜಿ ಧಾರ್ಮಿಕ ದತ್ತಿ ಸಚಿವರಾದ ಶ್ರೀ ಕೆ. ಅಮರನಾಥ್ ಶೆಟ್ಟಿ ಯವರು ನುಡಿದರು.
ದಿವಂಗತ ಎಚ್. ನಾರಾಯಣ ಸನಿಲ್‌ರವರ ಹುಟ್ಟು ಹಬ್ಬದ ನೆನಪಿನಲ್ಲಿ ಎಚ್. ನಾರಾಯಣ ಸನಿಲ್ ನೆನಪು ಸಮಿತಿಯ ಆಶ್ರಯದಲ್ಲಿ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಸಾಹಿತ್ಯ ಅಕಾಡಮಿಯ ರಿಜಿಸ್ಟರ್ ಚಂದ್ರಾಸ್ ರೈ ವಹಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಗೋಕರ್ಣಾಥೇಶ್ವರ ಶಿಕ್ಷಣ ಸಂಸ್ಥೆಯ ಮಾನ್ಯೇಜಿಂಗ್ ಟ್ರಸ್ಟಿಯಾದ ಪಿ. ಸಾದು ಪೂಜಾರಿ, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಲಜ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಂ. ವಿಶ್ವನಾಥ್ ಭಟ್, ಪಿ.ಯು.ಸಿ ಕಾಲೇಜಿನ ಪ್ರಾಂಶುಪಾಲಾದ ಶ್ರೀಮತಿ ಗಿರಿಜವ್ವ ಮೇಣಸಿನಕಾಯಿ, ಹಳೆಯಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಪದ್ಮಾವತಿ ಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಸಮಿತಿಯ ಸಂಚಾಲಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿ ಪ್ರಸ್ತಾವನೆಯನ್ನು ಗೈದರು. ಸಮಿತಿ ಸಂಚಾಲಕ ಎಚ್. ವಸಂತ್ ಬೆರ್ನಾರ್ಡ್ ಧನ್ಯವಾದ ಗೈದರು. ಕುಮಾರಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.







