ಮಾ. 24 : ಕೋಟೆಕೇರಿ ಶ್ರೀ ನವದುರ್ಗಾ ಯುವಕ ವೃಂದದ ವಾರ್ಷಿಕೋತ್ಸವ
ಮುಲ್ಕಿ, ಮಾ.23 : ಇಲ್ಲಿನ ಕೋಟೆಕೇರಿ ಶ್ರೀ ನವದುರ್ಗಾ ಯುವಕ ವೃಂದದ ವಾರ್ಷಿಕೋತ್ಸವವು ಮಾರ್ಚ್ 24 ರಂದು ಕೋಟೆಕೇರಿಯ ಯುವಕ ವೃಂದದ ವಠಾರದಲ್ಲಿ ಜರಗಲಿದೆ.
ಸಂಜೆ ಜರಗಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್ ವಹಿಸಲಿದ್ದು ಕಾರ್ಯಕ್ರಮವನ್ನು ಮುಂಬೈ ನ ಸದಾಶಿವ ಶಾಂತಿ ಉದ್ಘಾಟಿಸಲಿದ್ದಾರೆ.
ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ನೀಡಲಿದ್ದು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಮುಲ್ಕಿಯ ಕೆಥೋಲಿಕ್ ಚರ್ಚ್ ನ ಧರ್ಮ ಗುರು ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಹೆಜಮಾಡಿ ಕೋಟೆ ಹೌಸ್ ಕೆಎಸ್ ಶೇಖಬ್ಬ ಹಾಗೂ ಯೋಗ ಗುರು ಕೆಂಚನಕೆರೆಯ ಯೋಗೋಪಾಸನದ ಜಯ ಮುದ್ದು ಶೆಟ್ಟಿ ಮುಖ್ಯ ಆತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾತ್ರಿ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮ ಹಾಗೂ ನಾಟಕ ನಡೆಯಲಿದೆ.
Next Story





