Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಾಷ್ಟಗೀತೆಯನ್ನು ಟೀಕಿಸಿದ, ಹತ್ಯಾ...

ರಾಷ್ಟಗೀತೆಯನ್ನು ಟೀಕಿಸಿದ, ಹತ್ಯಾ ರಾಜಕೀಯವನ್ನು ಘೋಷಿಸಿದ ಇಬ್ಬರು ಜೆಡಿಯು ಶಾಸಕರ ಅಮಾನತು!

ವಾರ್ತಾಭಾರತಿವಾರ್ತಾಭಾರತಿ23 March 2016 1:12 PM IST
share
ರಾಷ್ಟಗೀತೆಯನ್ನು ಟೀಕಿಸಿದ, ಹತ್ಯಾ ರಾಜಕೀಯವನ್ನು ಘೋಷಿಸಿದ ಇಬ್ಬರು ಜೆಡಿಯು ಶಾಸಕರ ಅಮಾನತು!

ಪಟ್ನಾ, ಮಾ.23: ಬಿಹಾರ ಅಧಿಕಾರರೂಢ ಪಕ್ಷ ಜೆಡಿಯುಗೆ ಇಬ್ಬರು ಶಾಸಕರು ಮಂಗಳವಾರ ಲಜ್ಜೆಯ ಸ್ಥಿತಿಯನ್ನು ಹುಟ್ಟುಹಾಕಿದ್ದಾರೆ.

ಹತ್ಯಾರಾಜಕೀಯ ಹೇಳಿಕೆಗಳಿಗೆ ಕುಪ್ರಸಿದ್ಧರಾದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಮತ್ತು ರಾಷ್ಟ್ರಗೀತೆಯನ್ನು ಗುಲಾಮತನದ ಸಂಕೇತ ಎಂದು ಹೇಳುವ ಜೆಡಿಯು ಮೇಲ್ಮನೆ ಸದಸ್ಯ ರಾಣಾ ಗಂಗೇಶ್ವರ್‌ರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ರಾಣಾಗಂಗೇಶ್ವರ್ ಸಮಷ್ಠಿಪುರದ ಪಟೇಲ್ ಮೈದಾನದಲ್ಲಿ ಸೊಮವಾರ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಶೋಷಕರಿಗೆ ಜೈಕಾರ ಹಾಕಿದಂತಿದೆ. ಅಧಿನಾಯಕ ಜೈ ಎನ್ನುವ ಸಾಲು ಇರುವುದರಿಂದ ಅದು ರಾಷ್ಟ್ರಗೀತೆ ಹೇಗೆ ಅಗುತ್ತದೆ ಎಂದು ಪ್ರಶ್ನಿಸಿದ್ದರು. ಆನಂತರ ಆ ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ನಗರ ವಿಕಾಸ ಸಚಿವ ಮಹೇಶ್ವರ್ ಹಜಾರಿ ನಂತರ ಜನರಲ್ಲಿ ಕ್ಷಮೆ ಯಾಚಿಸಿ ಕೋಲಾಹಲವನ್ನು ಶಾಂತಗೊಳಿಸಿದ್ದರು.
 

ಇದಕ್ಕಿಂತ ಮೊದಲು ಗೋಪಾಲ್‌ಪುರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ರವಿವಾರ ನಾನು ಈಗ ಪುನಃ ಹತ್ಯಾ ರಾಜಕೀಯ ಮಾಡುತ್ತೇನೆ ಅಥವಾ ಮಾಡಿಸುತ್ತೇನೆ ಎಂದು ಹೇಳಿದ್ದರು. "ನಾನು ಮೊದಲು ಹತ್ಯಾ ರಾಜಕೀಯ ಮಾಡುತ್ತಿದ್ದೆ. ಆದರೆ ನಂತರ ಇಂತಹ ರಾಜಕೀಯವನ್ನು ತೊರೆದಿದ್ದೆ. ಈಗ ವಿರೋಧಿಗಳ ಕಡೆಯಿಂದ ನನ್ನ ವಿರುದ್ಧ ನಿರಂತರ ಸುಳ್ಳಾರೋಪ ಹೊರಿಸಲಾಗುತ್ತಿದೆ.

ನಾನು ಮಂಚದಲ್ಲಿ ಕುಳಿತು ಜನರು ನನ್ನ ವೋಟರ್ ಆಗಿಲ್ಲ. ಆದರೂ ನಾನು ನಿಮಗೆ ಸುರಕ್ಷೆಯನ್ನು ನೀಡುತ್ತೇನೆ. ನನ್ನ ಬಳಿ ಗುಂಡು ಹಾಗೂ ತುಫಾಕಿಯ ತಾಕತ್ತಿದೆ" ಎಂದು ಮಂಡಲ್ ಹೇಳಿದ್ದರು. ಸೋಮವಾರ ಮಂಡಲ್ ಶರಾಬು ನಿಷೇಧ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಶರಾಬಿಲ್ಲದೆ ಮನಸೇ ಇಲ್ಲ. ಶರಾಬಿಲ್ಲದೆ ಹೋಳಿಯನ್ನು ಹೇಗೆ ಆಚರಿಸುವುದು? ಒಂದು ವೇಳೆ ಶರಾಬು ಬಂದ್ ಆದರೆ ಗಾಂಜಾ ಅಫೀಮುಗಳಿವೆಯಲ್ಲ ಎಂದು ಹೇಳಿದ್ದರು. ಶಾಸಕರಿಬ್ಬರ ಹೇಳಿಕೆಗಳನ್ನು ಗಮನಿಸಿ ಸರ್ವಸಮ್ಮತಿಯಿಂದ ಅವರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಕಾರಣ ಕೇಳಿ ನೋಟಿಸು ಜಾರಿಗೊಳಿಸಲಾಗಿದೆ.

ಪ್ರದೇಶದ ಅಧ್ಯಕ್ಷ ವಶಿಷ್ಠ ನಾರಾಯಣ್ ಸಿಂಗ್ ಗೋಪಾಲ್ ಮಂಡಲ್‌ರ ಹೇಳಿಕೆ ಅಸ್ವೀಕಾರಾರ್ಹವಾಗಿದೆ. ಪಕ್ಷವು ಅವರ ಹೇಳಿಕೆಯನ್ನು ಖಂಡಿಸುತ್ತಿದೆ ಎಂದು ಹೇಳಿದ್ದಾರೆ.

ಈತನ್ಮಧ್ಯೆ ಬಿಜೆಪಿ ನಾಯಕ ಶಹನವಾರ್ ಹುಸೈನ್ ಈ ಪ್ರಕರಣದ ಕುರಿತು ಪ್ರತಿಕ್ರಿಯಿಸುತ್ತಾ ನಿತೀಶ್ ಕುಮಾರ್‌ರಿಗೆ ಅವರ ಶಾಸಕರು ಎಂತಹ ಹೇಳಿಕೆ ನೀಡುತ್ತಿದ್ದಾರೆಂಬುದು ಗಮನದಲ್ಲಿರಬೇಕಾಗಿದೆ. ಜೆಡಿಯು ಶಾಸಕರ ಹೇಳಿಕೆಗಳು ಅಪಾಯಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X