ಮುಲ್ಕಿ ನಗರ ಪಂಚಾಯತ್‌ನಲ್ಲಿ "ವಿಶ್ವ ಜಲ ದಿನಾಚರಣೆ" ಚಾಲನೆ
ಮುಲ್ಕಿ, ಮಾ.23: ಮುಲ್ಕಿ ನಗರ ಪಂಚಾಯತ್‌ನಲ್ಲಿ "ವಿಶ್ವ ಜಲ ದಿನಾಚರಣೆ" ಯ ಅಂಗವಾಗಿ ನೀರು ಮಿತ ಬಳಕೆಯ ಬಗ್ಗೆ ಮಾಹಿತಿ ಬ್ಯಾನರ್ ಮತ್ತು ಕರಪತ್ರ ವಿತರಿಸುವ ಮೂಲಕ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವಿ. ಎಚ್. ಕೃಷ್ಣಮೂರ್ತಿ ಚಾಲನೆ ನೀಡಿದರು.
ಕಾರ್ಯಪಾಲಕ ಅಭಿಯಂತರರಾದ ಶ್ರೀಧರ್, ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಸ್ಥಾಯಿ ಸಮಿತಿ ಅಧ್ಯಕ್ಷ ಸುನಿಲ್ ಆಳ್ವ, ಮುಲ್ಕಿ ನಗರ ಪಂಚಾಯತ್‌ನ ಸ್ವಚ್ಛತಾ ರಾಯಭಾರಿಯಾದ ಭಾಸ್ಕರ್ ಹೆಗ್ಡೆ, ಮುಖ್ಯಾಧಿಕಾರಿ ವಾಣಿ ವಿ. ಆಳ್ವ, ಸದಸ್ಯರಾದ ಪುತ್ತುಬಾವ, ಪುರುಷೋತ್ತಮ ರಾವ್, ಬಶೀರ್, ಸುಳ್ಯ ನಗರ ಪಂಚಾಯತ್‌ನ ಮುಖ್ಯಾಧಿಕಾರಿ ಮತ್ತು ಮುಲ್ಕಿ ನಗರ ಪಂಚಾಯತ್‌ನ ಸಿಬ್ಬಂದಿ ಉಪಸ್ಥಿತರಿದ್ದರು.
Next Story





