ರೂ. 39,000ದ ಕೈಗೆಟಕುವ ದರದ ಐಫೋನ್ !
ಮೂಗಿಗೆ ತುಪ್ಪ ಹಚ್ಚಿದ ಆಪಲ್‌ನ ಹೊಸ ಮೊಬೈಲ್ ಬಗ್ಗೆ ಭಾರತೀಯರಲ್ಲಿ ನಿರಾಸಕ್ತಿ

ನವದೆಹಲಿ : ಆಪಲ್ ತನ್ನ 4 ಇಂಚಿನ ಅಗ್ಗದ ಐಫೋನ್ ಬಿಡುಗಡೆ ಮಾಡಿ ಬಹಳ ಸುದ್ದಿಯಲ್ಲಿದ್ದರೂ, ಅಮೆರಿಕಾದಲ್ಲಿ 16 ಜಿಬಿ ಸಾಮರ್ಥ್ಯದ ಐಫೋನ್‌ಎಸ್‌ಇ399$(ರೂ 27,500)ಗೆ ದೊರೆಯುವುದಾದರೆ ಭಾರತದಲ್ಲಿ ಇದೇ ಫೋನ್ ಎಪ್ರಿಲ್ 8ರಿಂದ ರೂ 39,000ಕ್ಕೆ ದೊರೆಯಲಿದ್ದು ಆಪಲ್‌ನ ಭಾರತೀಯ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆಯುಂಟು ಮಾಡಿದೆ. ಅದೇ ಸಮಯ 64 ಜಿಬಿ ಐಫೋನಿನ ಬೆಲೆ ಅಮೆರಿಕಾದಲ್ಲಿ 499$ (ರೂ 34,000) ಎಂದು ಈಗಾಗಲೇಘೋಷಿತವಾಗಿದ್ದರೂ ಭಾರತದಲ್ಲಿ ಅದರ ದರವನ್ನು ನಿಗದಿಪಡಿಸಲಾಗಿಲ್ಲ.
ಆಪಲ್ ಐಫೋನ್ ವಿತರಕರಾದ ರೆಡಿಂಗ್ಟನ್ ಎಂಡ್ ಬೀಟೆಲ್ ಪ್ರಕಾರ ಬುಕ್ಕಿಂಗ್ ಮಾರ್ಚ್ 29ರ ಮಧ್ಯರಾತ್ರಿಯಿಂದ ಆರಂಭವಾಗುವುದು. ಆದರೆ ಒಂದಂತೂ ನಿಜ, ಭಾರತೀಯ ರಿಟೇಲರುಗಳೂ ಈ ಐಫೋನ್ ಕನಿಷ್ಠ ರೂ22000ಕ್ಕೆ ದೊರೆಯಬಹುದೆಂದು ನಿರೀಕ್ಷಿಸಿದ್ದರು. ಮುಂದಿನ ಒಂದು ದಶಕದ ಅವಧಿಯಲ್ಲಿ ಆಪಲ್ಭಾರತವನ್ನು ತನ್ನ ಅಭಿವೃದ್ಧಿ ಪಥದ ಪ್ರಮುಖ ಭಾಗವಾಗಿ ಪರಿಗಣಿಸುವುದೆಂದು ಆಪಲ್‌ನ ಮುಖ್ಯ ಕಾರ್ಯನಿರ್ವಾಹಕ ಟಿಮ್ ಕ್ರುಕ್ ಇತ್ತೀಚೆಗೆಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆಪಲ್ ಭಾರತದಲ್ಲಿ ರಿಟೇಲ್ ಸ್ಟೋರುಗಳನ್ನು ತೆರೆಯುವ ಬಗ್ಗೆ ಯೋಚಿಸುತ್ತಿದ್ದರೂ ರಿಟೇಲರುಗಳುಹೊಸ ಐಫೋನ್ ಎಸ್‌ಇ ನಿರೀಕ್ಷೆಗೂ ಮೀರಿ ಮಾರಾಟವಾಗುವುದೆಂಬ ಭರವಸೆಯಿಲ್ಲ. ಐಫೋನ್ ಎಸ್‌ಇಯ ಮಾರಾಟ ಹಿಂದಿನ ಐಫೋನ್ 5ಸಿ ಮಾಡೆಲ್‌ನಂತೆಯೇ ಕುಗ್ಗಬಹುದು ಎಂಬುದು ಅವರ ಅನಿಸಿಕೆ.
‘‘ಹಿಂದೆಲ್ಲಾ ಐಫೋನ್ ಬಿಡುಗಡೆಯಾಗುವ ಸಂದರ್ಭದಲ್ಲಿ ಗ್ರಾಹಕರು ಪ್ರಿ-ಬುಕ್ಕಿಂಗ್ ಬಗ್ಗೆ ಅತ್ಯುತ್ಸಾಹ ತೋರಿಸುತ್ತಿದ್ದರು. ಆದರೆ ಈ ಬಾರಿ ಹಾಗಲ್ಲ,’’ಎಂದು ರಿಟೇಲ್ ಮಾರಾಟಗಾರರೊಬ್ಬರು ಹೇಳಿದ್ದಾರೆ.
ಈ ಹಿಂದೆ ಕೂಡ ಆಪಲ್ ತನ್ನ ಐಫೋನ್ 6ಎಸ್ ಹಾಗೂ 6 ಎಸ್ ಪ್ಲಸ್ ದರವನ್ನು ಅಮೆರಿಕಾದಲ್ಲಿನ ದರಕ್ಕಿಂತ ರೂ 14,000 ದಿಂದ ರೂ 16,000 ಹೆಚ್ಚು ನಿಗದಿಪಡಿಸಿತ್ತಲ್ಲದೆನಂತರ ಗ್ರಾಹಕರ ನಿರುತ್ಸಾಹವನ್ನು ಗಮನಿಸಿ ಬೈಬ್ಯಾಕ್ ಸ್ಕೀಮ್ ಹಾಗೂಇನ್ನಿತರ ರೀತಿಯಲ್ಲಿ ಗ್ರಾಹಕರನ್ನು ಆಕರ್ಷಿಸಲುಯತ್ನಿಸಿತ್ತು.
ಇದೀಗ ತನ್ನ ಐಫೋನ್ ಎಸ್‌ಇ ವಿಚಾರದಲ್ಲೂ ಆಪಲ್ ಗ್ರಾಹಕರ ಮೂಗಿಗೆ ತುಪ್ಪ ಸವರುವ ಯತ್ನ ಮಾಡುತ್ತಿದೆಯೆಂಬುದು ಹಲವರ ಅಭಿಪ್ರಾಯ.







