ಕಲಬುರಗಿ ಜಿಲ್ಲಾ ಆಸ್ಪತ್ರೆ : ಶಿಶುಗಳ ತುರ್ತು ನಿಗಾ ಘಟಕದಲ್ಲಿ ಅಗ್ನಿ ಆಕಸ್ಮಿಕ
ಪ್ರಾಣಾಪಾಯದಿಂದ ಪಾರಾದ 20ಕ್ಕೂ ಅಧಿಕ ಶಿಶುಗಳು

ಕಲಬುರುಗಿ, ಮಾ.23: ಕಲುಬುರುಗಿ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ ಇಂದು ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಒಂದು ಶಿಶುವಿನ ಸಣ್ಣಪುಟ್ಟ ಗಾಯವಾಗಿದೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 20ಕ್ಕೂ ಅಧಿಕ ಶಿಶುಗಳು ಪ್ರಾಣಾಪಾಯದಿಂದ ಪಾರಾಗಿದೆ.
ಜಿಲ್ಲಾಸ್ಪತ್ರೆಯ ಎನ್‌ಐಸಿಯುನಲ್ಲಿ ಎಸಿ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಒಂದು ನವಜಾತ ಶಿಶುವಿನ ಎರಡು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಶಿಶುಗಳನ್ನು ತಕ್ಷಣ ಸ್ಥಳಾಂತರಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿ ಫಕೀರಪ್ಪ ಹೊಗೆ ಕಂಡ ತಕ್ಷಣ ಶಿಶುಗಳ ತುರ್ತು ನಿಗಾ ಘಟಕದ ಗಾಜು ಒಡೆದು ಶಿಶುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ತಿಳಿದು ಬಂದಿದೆ.
Next Story





