ಕದಿರೂರ್ ಮನೋಜ್ ಹತ್ಯೆ ಪ್ರಕರಣ: ಸಿಪಿಐಎಂ ಕಾರ್ಯದರ್ಶಿ ಪಿ. ಜಯರಾಜನ್‌ಗೆಜಾಮೀನು

ತಿರುವನಂತಪುರಂ: ಕದಿರೂರ್ ಮನೋಜ್ ಹತ್ಯೆ ಪ್ರಕರಣದಲ್ಲಿ ಸಿಪಿಐಎಂ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಪಿ. ಜಯರಾಜನ್‌ರಿಗೆ ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿದೆ. ತಲಶ್ಶೇರಿ ಪ್ರಿನ್ಸಿಪಲ್ ಸೆಶನ್ಸ್ ಕೋರ್ಟು ಜಾಮೀನು ನೀಡಿದ್ದು ಎರಡು ತಿಂಗಳಾವಧಿಯಲಿ ಕಣ್ಣೂರು ಜಿಲ್ಲೆಯನ್ನು ಜಯರಾಜನ್ ಪ್ರವೇಶಿಸಲು ಸಾಧ್ಯವಿಲ್ಲವೆನ್ನಲಾಗಿದೆ. ಅವರ ಆರೋಗ್ಯಸ್ಥಿತಿಯನ್ನು ಗಮನದಲ್ಲಿರಿಸಿ ಜಾಮೀನು ನೀಡಲಾಯಿತೆಂದು ಕೋರ್ಟು ಅಭಿಪ್ರಾಯವ್ಯಕ್ತಪಡಿಸಿದೆ.
ನಿನ್ನೆ ಒಂದೂವರೆ ಗಂಟೆಗೂ ಅಧಿಕ ವಿಸ್ತರಿಸಿದ ಎರಡೂ ಕಡೆಯ ಪಾಟಿ ಸವಾಲನ್ನು ಕೇಳಿಸಿಕೊಂಡ ನಂತರ ತೀರ್ಪನ್ನು ಇಂದಿಗೆ ವಿಸ್ತರಿಸಲಾಗಿತ್ತು. ಬಂಧನಕ್ಕೊಳಗಾದ ನಂತರ ಹೃದಯಕ್ಕೆ ಸಂಬಂಧಿಸಿದ ರೋಗದ ಕಾರಣದಿಂದ ಕೋಝಿಕ್ಕೋಡ್ ತಿರುವನಂತಪುರಂನಲ್ಲಿ ಚಿಕಿತ್ಸೆಗೊಳಗಾಗಿದ್ದರು. ಆನಂತರ ಅವರನ್ನು ಸಿಬಿಐ ಪ್ರಶ್ನಿಸಿತ್ತು. ಕಳೆದ ದಿವಸ ಮೊಣಕಾಲು ನೋವು ಉಲ್ಬಣಿಸಿದ್ದರಿಂದ ಅವರನ್ನುಆಯುರ್ವೇದ ಆಸ್ಪತ್ರೆಗೆ ಸೇರಿಸಲಾಗಿತ್ತು.
Next Story





