ತಮಿಳ್ನಾಡಿನಲ್ಲಿ ಎಡಪಕ್ಷಗಳುಮತ್ತು ವಿಜಯ್‌ಕಾಂತ್‌ರ ಡಿಎಂಡಿಕೆ ಮೈತ್ರಿ!

ಚೆನ್ನೈ, ಮಾಚ್.23: ಮೈತ್ರಿಗೆ ಕರುಣಾನಿಧಿ ನೀಡಿದ ಆಹ್ವಾನವನ್ನು ತಿರಸ್ಕರಿಸಿದ ವಿಜಯ್‌ಕಾಂತ್‌ರ ಪಕ್ಷ ಡಿಎಂಡಿಕೆ ಪಕ್ಷ ಎಡಪಕ್ಷಗಳ ಮೈತ್ರಿಯೊಂದಿಗೆ ಸ್ಪರ್ಧಿಸಲಿದೆ. ಕ್ಯಾಪ್ಟನ್ ವಿಜಯ್‌ಕಾಂತ್ ನೇತೃತ್ವದ ದೇಶೀಯ ಮೂರ್‌ಪೋಕ್ ದ್ರಾವಿಡ ಕಳಗಂ(ಡಿಎಂಡಿಕೆ) ಜನಕ್ಷೇಮ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿ ಚುನಾವಣೆಯನ್ನು ಎದುರಿಸಲಿದೆ ಎಂದು ವಿಜಯ್‌ಕಾಂತ್ ಘೋಷಿಸಿದ್ದಾರೆ. ಒಟ್ಟು 234 ಸ್ಥಾನಗಳಲ್ಲಿ 124 ಸ್ಥಾನಗಳಲ್ಲಿ ಡಿಎಂಡಿಕೆ ಅಭ್ಯರ್ಥಿಗಳನ್ನು ನಿಲ್ಲಿಸಿದರೆ ಮಿತ್ರಕೂಟದ ಉಳಿದವರು 110 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ. ಡಿಎಂಕೆ ಮತ್ತು ಬಿಜೆಪಿ ಮುಂದಿಟ್ಟ ನಡೆಗಳನ್ನು ನಿರ್ಲಕ್ಷಿಸಿ ವಿಜಯ್‌ಕಾಂ ಜನಕ್ಷೇಮ ಮೈತ್ರಿಕೂಟದ ಭಾಗವಾಗಿದ್ದಾರೆ. ಸಿಪಿಐಎಂ, ಸಿಪಿಐ, ವೈಕೋರ ಎಂಡಿಎಂಕೆ, ವಿಡುದಲೈ ಚಿರುತೆಗಳ್ ಪಕ್ಷಗಳು ಜನಕ್ಷೇಮ ಮೈತ್ರಿಕೂಟದಲ್ಲಿರುವ ಪಕ್ಷಗಳಾಗಿವೆ.
ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ವಿಜಯ್ ಕಾಂತ್ ಯೋಚಿಸಿದ್ದರು. ಆದರೆ ಮೈತ್ರಿಕೂಟದ ಭಾಗವಾಗುವುದಿಲ್ಲವೆಂದು ವಿಜಯ್‌ಕಾಂತ್‌ಗೆ ಮುಖ್ಯಮಂತ್ರಿಯಾಗುವ ಯೋಗ್ಯತೆಯಿದೆಯೆಂದೂ ಪತ್ನಿ ಪೇಮಲತ ಬಹಿರಂಗವಾಗಿ ಪ್ರಕಟಿಸಿದ್ದರು. ಹೆಚ್ಚು ಊಹಾಪೋಹಗಳಿಗೆ ಇದು ಆಸ್ಪದವಾಗಿತ್ತು. ಈನಡುವೆ ವಿಜಯ್‌ಕಾಂತ್ ತನ್ನ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಹಳೆಯ ಬಾವಿಗೆ ಬೀಳಲಿದ್ದಾರೆಂದು ವಿಜಯ್‌ಕಾಂತ್ ಮೈತ್ರಿಯ ಕುರಿತು ಈ ಹಿಂದೆ ಕರುಣಾ ನಿಧಿ ಘೋಷಿಸಿದ್ದರು. ಆದರೆ ವಿಜಯ್‌ಕಾಂತ್ ಹೊಸ ತೀರ್ಮಾನ ಡಿಎಂಕೆಗೆ ತಿರುಗೇಟಾಗಿ ಪರಿಣಮಿಸಿದೆ.
ಎಐಎಡಿಎಂಕೆ ಮತ್ತು ಡಿಎಂಕೆ ಪರಸ್ಪರ ಕಠಿಣ ಸ್ಪರ್ಧೆ ನಡೆಸಲಿವೆ ಎಂದು ಸಮೀಕ್ಷೆಗಳು ಹೇಳಿವೆ. ಎಐಎಡಿಎಂಕೆ ಶೇ.33ರಷ್ಟು ವೋಟು ಗಳಿಸುವಾಗ ಶೆ.30-31ರಷ್ಟು ವೋಟುಗಳನ್ನು ಡಿಎಂಕೆ ವೋಟುಗಳಿಸಲಿದೆಎಂದು ಸರ್ವೇ ತಿಳಿಸಿದೆ. ಈ ಪರಿಸ್ಥಿತಿಯಲ್ಲಿ ವಿಜಯ್‌ಕಾಂತ್‌ಗೆ ಶೆ.8%ರಷ್ಟು ವೋಟುಗಳಿಸಲು ಸಾಧ್ಯವಾಗಲಿದೆ ಎಂದು ಅದು ಹೇಳಿದೆ. ಆದ್ದರಿಂದ ಎಡಪಕ್ಷಗಳು ಮತ್ತು ವಿಜಯ್‌ಕಾಂತ್ ಸೇರಿ ಚುನಾವಣೆಗೆ ಸ್ಪರ್ಧಿಸಿದರೆ ತಮಿಳ್ನಾಡಿನ ರಾಜಕೀಯದಲ್ಲಿಅಲ್ಲೋಲಕಲ್ಲೋಲ ವುಂಟಾಗಲಿದೆ ಎಂದು ಹೇಳಲಾಗುತ್ತಿದೆ.
2011ರ ಚುನಾವಣೆಯಲ್ಲಿ ಅಣ್ಣಾಡಿಎಂಕೆಯ ಭಾಗವಾಗಿ ಸ್ಪರ್ಧಿಸಿದ್ದ ಡಿಎಂಡಿಕೆ 41 ಸೀಟುಗಳಲ್ಲಿ 29 ಸೀಟುಗಳನ್ನು ಗೆದ್ದಿತ್ತು, ಡಿಎಂಕೆ ಪತನದ ನಂತರ ವಿಜಯ್‌ಕಾಂತ್ ಪ್ರತಿಪಕ್ಷ ನಾಯಕನಾದರು. ಅದೇವೇಳೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ತೆಕ್ಕೆಗೆ ಹೋಗಿದ್ದ ವಿಜಯ್‌ಕಾಂತ್‌ರ ಪಕ್ಷಕ್ಕೆ ಒಂದು ಸ್ಥಾನದಲ್ಲಿಯೂ ಗೆಲ್ಲಲು ಸಾಧ್ಯವಾಗಿರಲಿಲ್ಲ.







