ಬೆಳ್ತಂಗಡಿ: – ಎತ್ತಿನ ಹೊಳೆ ಈಗಲೂ ಬದ್ಧ: ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ
ಬೆಳ್ತಂಗಡಿ: – ಎತ್ತಿನ ಹೊಳೆ ಈಗಲೂ ಬದ್ಧ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡರು ಕುಂದಾಪುರದಲ್ಲಿ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರ ಉಪಸಿಸ್ತಿತಿಯಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ ಇದು ಪಕ್ಷದ ಧ್ವಂದ್ವ ನಿಲುವನ್ನು ಸೂಚಿಸುತ್ತದೆ ಎಂದು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಆರೋಪಿಸಿದೆ. ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲ್ ಈ ಯೋಜನೆಗೆ ಆರಂಭದಿಂದಲೂ ವಿರೋಧಿಸುತ್ತಾ ಚಳುವಳಿಗಳಲ್ಲಿ ಭಾಗವಹಿಸುತ್ತಾ ಪಾದಯಾತ್ರೆ ಮಾಡುತ್ತಾ ಬಂದಿದ್ದಾರೆ. ದ.ಕ. ಬಿಜೆಪಿ ಈ ಯೋಜನೆಗೆ ಸ್ಪಷ್ಟ ವಿರೋಧ ವ್ಯಕ್ತಪಡಿಸಿದೆ. ಜಿಲ್ಲಾ ಪಂಚಾಯತ್/ ತಾಲೂಕು ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಎಲ್ಲೆಡೆ ಇದನ್ನು ಪ್ರಚಾರ ಮಾಡಿದೆ.
ಈ ದ್ವಂದ್ವ ನಿಲುವು ಯಾಕೆ? ಪಕ್ಷದ ನಿಲುವಿಗೆ ಡಿ.ವಿ..ಯವರು ಬದ್ಧರಾಗಿರಬೇಕಲ್ಲವೇ? ಅವೈಜ್ಜಾನಿಕ, ಪರಿಸರಘಾತಕ ಈ ಯೋಜನೆ ನೇತ್ರಾವತಿ ತಿರುವು ಯೋಜನೆಯದ್ದೇ ಒಂದು ಭಾಗ. ಹೆಸರು ಬದಲಾಯಿಸಿ ಕುಡಿಯುವ ನೀರಿನ ಯೋಜನೆ ಎಂದು ಹೇಳಲಾಗಿದೆ ಎಂದು ಡಿ.ವಿ.ಯವರಿಗೆ ಗೊತ್ತಿದ್ದೂ ಈ ಜಿಲ್ಲೆಯ ಕೃಷಿಕರ, ಮೀನುಗಾರರ ಬದುಕಿಗೆ, ಜೀವ ಸಂಕುಲಕ್ಕೆ ಸಂಚಕಾರ ತರುವ ಈ ಯೋಜನೆಗೆ ಡಿವಿಯವರು ಬೆಂಬಲಿಸುವುದು ಜಿಲ್ಲೆಯ ಜನರಿಗೆ ದ್ರೋಹ ಬಗೆದಂತೆ ಮಾತ್ರವಲ್ಲ ತನ್ನ ಪಕ್ಷಕ್ಕೇ ದ್ರೋಹ ಬಗೆದಂತೆ. ಇನ್ನಾದರೂ ವಾಸ್ತವವನ್ನು ಅರ್ಥಮಾಡಿಕೊಂಡು ಈ ಯೋಜನೆಯ ತಡೆಗೆ ಜಿಲ್ಲೆಯ ವಿವಿಧ ಹೋರಾಟ ಸಮಿತಿಗಳೊಂದಿಗೆ ದನಿ ಗೂಡಿಸಬೇಕೆಂದು ಟ್ರಸ್ಟ್ ಆಗ್ರಹಿಸಿದೆ.







