ಎಪ್ರಿಲ್ 1-30: ಮಾಲಿಕುದ್ದಿನಾರ್ ಉರೂಸ್
ಮಂಗಳೂರು, ಮಾ. 23: ಇಚ್ಚಿಲಂಗೋಡು ಮಾಲಿಕುದ್ದಿನಾರ್ ಉರೂಸ್ ಪ್ರಯುಕ್ತ ಮುಂಬರುವ ಎಪ್ರಿಲ್ 1ರಿಂದ 30ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ.
ಎಪ್ರಿಲ್ 1ರಂದು ರಾತ್ರಿ 8 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು. ಕಾಸರಗೋಡು ಸಂಯುಕ್ತ ಖಾಝಿ ಶೈಖುನಾ ಶೈಖುಲ್ ಜಾಮಿಅ ಕೆ.ಅಲಿಕುಟ್ಟಿ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಎ.30ರಂದು ಕಾರ್ಯಕ್ರಮ ಸಮಾರೋಪಗೊಳ್ಳಲಿದ್ದು, ಶೈಖುನಾ ಅಲಿಕುಂಞಿ ಉಸ್ತಾದ್‌ಒಳಯಂ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





