ವಿಟ್ಲ: ಮೇಗಿನಪೇಟೆಯಲ್ಲಿ ರಕ್ತದಾನ ಶಿಬಿರ

ವಿಟ್ಲ : ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಡಿ ಗ್ರೂಪ್ ಮೇಗಿನಪೇಟೆ-ವಿಟ್ಲ ಇವುಗಳ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಯೇನಪೋಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಮೇಗಿನಪೇಟೆ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಇತ್ತೀಚೆಗೆ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ವಿ.ಎಚ್. ಅಶ್ರಫ್ ಅವರು ಸಂಘ-ಸಂಸ್ಥೆಗಳು ರಕ್ತದಾನದಂತಹ ಸಮಾಜಮುಖಿ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಂಡಾದ ಸಹಜವಾಗಿಯೇ ಸಾಮಾಮಿಕ ಅನಿಷ್ಠಗಳು ದೂರವಾಗಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಪ್ರಶಾಂತ್ ಮಾತನಾಡಿ ರಕ್ತದಾನ ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನವಾಗಿದ್ದು, ಒಂದು ಜೀವ ಉಳಿಸಿದ ಪ್ರತಿಫಲ ಇದರಿಂದ ದೊರೆಯಲು ಸಾಧ್ಯ. ಆರೋಗ್ಯವಂತ ಪ್ರತಿಯೊಬ್ಬ ವ್ಯಕ್ತಿಗೂ ರಕ್ತದಾನ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಯುವಜನಾಂಗ ಮುಂದೆ ಬರಬೇಕಾಗಿದೆ ಎಂದು ಕರೆ ನೀಡಿದರು.
ವಿಟ್ಲ ಮಸೀದಿ ಖತೀಬ್ ಹಸನ್ ಹರ್ಶದಿ ದುವಾ ನೆರವೇರಿಸಿದರು. ಉದ್ಯಮಿ ಇಕ್ಬಾಲ್ ಹಳೇಮನೆ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ರಕ್ತದಾನಕ್ಕಾಗಿ ಶ್ರಮಿಸುತ್ತಿರುವ ಮಂಗಳೂರು ಬ್ಲಡ್ ಡೋನರ್ಸ್ ಅಧ್ಯಕ್ಷ ಸಿದ್ದೀಕ್ ಉರ್ಣಿ ಮಂಜೇಶ್ವರ ಹಾಗೂ ಅಜರುದ್ದೀನ್ ಮೇಗಿನಪೇಟೆ ಅವರನ್ನು ಸನ್ಮಾನಿಸಲಾಯಿತು.
ಕೋಣಾಜೆ ಪಿ.ಎ ಕಾಲೇಜು ಉಪನ್ಯಾಸಕ ಮುಸ್ತಫ ಖಲೀಲ್, ವಿಟ್ಲ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ವಿ. ಅಬ್ದುಲ್ ಖಾದರ್ ಬೊಬ್ಬೆಕೇರಿ, ಸದಸ್ಯರಾದ ಇಬ್ರಾಹಿಂ ಹಾಜಿ ಪೊನ್ನೋಟ್ಟು, ವಿ.ಎಂ. ಇಬ್ರಾಹಿಂ ಏರ್ ಸೌಂಡ್ಸ್, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರೀಕ್ಷಕ ಸಫ್ವಾನ್ ಮೇಗಿನಪೇಟೆ, ನ್ಯಾಯವಾದಿ ಅನ್ಸಾರ್ ವಿಟ್ಲ, ಎಸ್.ಎಫ್.ಐ ಜಿಲ್ಲಾ ಉಪಾಧ್ಯಕ್ಷ ತುಳಸೀದಾಸ್, ವಿಟ್ಲ ಗ್ರಾ.ಪಂ. ಮಾಜಿ ಸದಸ್ಯ ವಿ.ಕೆ.ಎಂ. ಅಶ್ರಫ್, ಮಸೀದಿ ಆಡಳಿತ ಸಮಿತಿ ಸದಸ್ಯ ಹಮೀದ್ ಪೊನ್ನೋಟ್ಟು, ಕಾರ್ಯದರ್ಶಿ ಇಕ್ಬಾಲ್, ದೇರಳಕಟ್ಟೆ ಯೇನಪೋಯ ಆಸ್ಪತ್ರೆಯ ಶಿಬಿರದ ಮುಖ್ಯಸ್ಥ ಅಬ್ದುಲ್ ರಝಾಕ್, ಡಿ ಗ್ರೂಪ್‌ನ ಹಂಝ ಮೇಗಿನಪೇಟೆ, ಇಸಾಕ್ ಮೊದಲಾದವರು ಉಪಸ್ಥಿತರಿದ್ದರು.
ರಫೀಕ್ ಪೊನ್ನೋಟ್ಟು ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.





