ಬ್ರೆಝಿಲ್‌ನಲ್ಲಿ 907 ಝಿಕಾ ಸೋಂಕು ಪ್ರಕರಣ

ಬ್ರೆಸೀಲಿಯ (ಬ್ರೆಝಿಲ್), ಮಾ. 23: ಝಿಕಾ ವೈರಸ್‌ನ ದಾಳಿ ಅಕ್ಟೋಬರ್‌ನಲ್ಲಿ ಆರಂಭವಾದಂದಿನಿಂದ ಬ್ರೆಝಿಲ್‌ನಲ್ಲಿ 907 ಮೈಕ್ರೊಸೆಫಲಿ ಪ್ರಕರಣಗಳು ದಾಖಲಾಗಿರುವುದು ಖಚಿತವಾಗಿದೆ.
ಮೈಕ್ರೊಸೆಫಲಿ ಕಾಯಿಲೆಗೆ ಒಳಗಾದ ಗರ್ಭಿಣಿಯರು ಚಿಕ್ಕ ತಲೆ ಮತ್ತು ಚಿಕ್ಕ ಮೆದುಳಿನ ಅಸಹಜ ಶಿಶುಗಳಿಗೆ ಜನ್ಮ ನೀಡುತ್ತಾರೆ.
ಈ ಪೈಕಿ 198 ಶಿಶುಗಳು ಸಾವಿಗೀಡಾಗಿವೆ.
ಆರೋಗ್ಯ ಅಧಿಕಾರಿಗಳು ಈಗಲೂ 4,293 ಶಂಕಿತ ಪ್ರಕರಣಗಳ ತಪಾಸಣೆ ನಡೆಸುತ್ತಿದ್ದಾರೆ.
Next Story





