Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವ್ಯಕ್ತಿತ ಪೂಜೆಯ ಪರಾಕಾಷ್ಠೆ

ವ್ಯಕ್ತಿತ ಪೂಜೆಯ ಪರಾಕಾಷ್ಠೆ

ರಮಾನಂದ ಶರ್ಮಾರಮಾನಂದ ಶರ್ಮಾ23 March 2016 11:00 PM IST
share
ವ್ಯಕ್ತಿತ ಪೂಜೆಯ ಪರಾಕಾಷ್ಠೆ

ವ್ಯಕ್ತಿ ಪೂಜೆ ಮತ್ತು ಅಕಾರದಲ್ಲಿದ್ದವರನ್ನು ಆರಾಸಿ, ಹೊಗಳಿ ಹೊನ್ನಶೂಲಕ್ಕೆ ಏರಿಸಿ ಯಾವುದಾದರೂ ಅಕಾರಕ್ಕೆ ಜೋತು ಬೀಳುವ, ಹೊಸದನ್ನು ಪಡೆಯುವ ಮತ್ತು ಇರುವುದನ್ನು ಉಳಿಸಿಕೊಳ್ಳುವ ಪ್ರಕ್ರಿಯೆಗೆ ಭಾರತದಲ್ಲಿ ದೀರ್ಘ ಇತಿಹಾಸವಿದೆ. ಜವಾಹರಲಾಲ್ ನೆಹರು ಕಾಲದಲ್ಲಿ ಆರಂಭವಾಗಿದೆ ಎಂದು ಹೇಳಲಾದ ಈ ರಾಜಕೀಯ ಬೆಳವಣಿಗೆ, ಇಂದಿರಾಗಾಂಯವರ ಕಾಲದಲ್ಲಿ ಪರಾಕಾಷ್ಠೆಗೆ ತಲುಪಿ ಉಚ್ಛ್ರಾಯ ಸ್ಥಿತಿಯಲ್ಲಿ ಇತ್ತು ಎಂದು ರಾಜಕೀಯ ಟೀಕಾಕಾರರು,ತುರ್ತು ಪರಿಸ್ಥಿತಿ ಸಮಯದಲ್ಲಿ ಅಂದಿನ ಕಾಂಗ್ರೆಸ್ ಮುಖಂಡ ದೇವಕಾಂತ ಬರುವಾರ ‘‘ಇಂದಿರಾಳೇ ಇಂಡಿಯಾ ಮತ್ತು ಇಂಡಿಯಾವೇ ಇಂದಿರಾ’’ (India Is Indira and Indira Is India) ಹೇಳಿಕೆಯನ್ನು ಮತ್ತು 1977 ರ ಜನತಾ ಸರಕಾರದ ಪತನದ ನಂತರ 1980 ರಲ್ಲಿ ನಡೆದ ಚುನಾವಣೆಯಲ್ಲಿ ಮ್ಯಾಜಿಕ್ ಮಾಡಿದ ‘‘ಇಂದಿರಾ ಲಾವೋ ದೇಶ್ ಬಚಾವೋ’’ ಘೋಷಣೆಗಳನ್ನು ಉಲ್ಲೇಖಿಸಿ ಅಭಿಪ್ರಾಯಪಡುತ್ತಾರೆ. ಆ ಪರಂಪರೆ ಈಗಲೂ ಆ ಪಕ್ಷದಲ್ಲಿ ವ್ಯಕ್ತಿ ಪೂಜೆ ಮತ್ತು ಕುಟುಂಬ ರಾಜಕಾರಣ ಮುಂದುವರಿದಿದೆ ಮತ್ತು ಯಾವುದೇ ರೀತಿಯಲ್ಲಿ ಕಡಿಮೆಯಾಗುವ ಲಕ್ಷಣಗಳು ಕಾಣುವುದಿಲ್ಲ. ಸುಮಾರು 470 ಸಂಘ -ಸಂಸ್ಥೆ, ಸ್ಮಾರಕ ಮತ್ತು ಕಟ್ಟಡಗಳಿಗೆ ನೆಹರು-ಇಂದಿರಾ ಕುಟುಂಬದ ಹೆಸರನ್ನು ಇಡಲಾಗಿತ್ತು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ವ್ಯಕ್ತಿ ಪೂಜೆ ಮತ್ತು ಕುಟುಂಬ ರಾಜಕಾರಣ ಈ ಪಕ್ಷದಲ್ಲಿ ಎಷ್ಟು ಆಳವಾಗಿದೆ ಎನ್ನುವುದು ಅರ್ಥವಾಗದಿರದು. ಈ ಪ್ರಕ್ರಿಯೆ ಒಂದು ರೀತಿಯ negative product ಕೊಡುತ್ತಿದ್ದರೂ, ಇತಿಹಾಸದಿಂದ ಮತ್ತು ಅನುಭವದಿಂದ ಪಾಠ ಕಲಿಯದ ಜಡತ್ವ ಅಥವಾ ಆಶಾಭಾವನೆ ಇನ್ನೂ ಅವರಲ್ಲಿ ಕಾಣುತ್ತಿದೆ. ಅದೇ ರಾಗದ ಆಲಾಪ, ಅದೇ ಪಕ್ಕವಾದ್ಯದಿಂದ ನಡೆಯುತ್ತಿದೆ.

   ಈಗ ಈ ಪರಂಪರೆಗೆ ಭಾರತೀಯ ಜನತಾ ಪಕ್ಷವೂ ಸೇರಿದೆ. ಅಟಲ್ ಬಿಹಾರಿ ವಾಜಪೇಯಿವರ ಕಾಲದಲ್ಲೂ ಈ ವ್ಯಕ್ತಿ ಪೂಜೆ ಇದ್ದರೂ, ಅದು ಕೇವಲ ನಾಮಕಾವಸ್ತೆಯಾಗಿತ್ತು. ಅವರು ಪ್ರಶ್ನಾತೀತ ಧುರೀಣರಾಗಿದ್ದರು. ಲಾಲ್‌ಕೃಷ್ಣ ಅಡ್ವಾಣಿಯವರ ಕಾಲದಲ್ಲಿ ಈ ಪರಂಪರೆ ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿದಿತ್ತು. ಅದರೆ, 2014 ರ ಮೋದಿ ಅಲೆಯ ನಂತರ, ಭಾರತೀಯ ಜನತಾ ಪಕ್ಷದಲ್ಲಿ ಈ ಪ್ರಕ್ರಿಯೆ ಕಾಂಗ್ರೆಸ್ಸನ್ನೂ ನಾಚಿಸುವಷ್ಟು ವೇಗದಲ್ಲಿ ಪಸರಿಸುತ್ತಿದೆ. ಭಾಜಪದವರು ಮಾತನಾಡುವಾಗ prefix ಅಥವಾ suffix ಮೋದಿ ಹೆಸರು ಬರಲೇಬೇಕು. ಕಾಂಗ್ರೆಸ್ ಸರಕಾರ ತನ್ನೆಲ್ಲಾ ಯೋಜನೆಗಳಿಗೆ, ಕೇವಲ ಇಂದಿರಾ- ನೆಹರು ಕುಟುಂಬದ ಹೆಸರುಗಳನ್ನು ಮಾತ್ರ ಇಡುತ್ತದೆ ಎಂದು ಮೂರು ದಶಕಗಳ ಕಾಲ ಸದಾ ಟೀಕಿಸಿದವರು, ಇಂದು ತಮ್ಮ ಪಕ್ಷದ ಪ್ರಮುಖರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಮಾಧ್ಯಮದ ವರದಿಯ ಪ್ರಕಾರ ಇತ್ತೀಚಿನ ಒಂದು ಭಾಜಪದ ಸಭೆಯಲ್ಲಿ ರಾಜಕೀಯ ನಿರ್ಣಯ ಮಂಡಿಸುವಾಗ, ಸಂಸದೀಯ ವ್ಯವಹಾರಗಳ ಮಂತ್ರಿ ವೆಂಕಯ್ಯ ನಾಯ್ಡು, ಪ್ರಧಾನ ಮೋದಿಯವರು ಈ ದೇಶಕ್ಕೆ ದೇವರು ಕೊಟ್ಟ ವರ (Gift Of God To India) ಎಂದು ಬಣ್ಣಿಸಿದರಂತೆ. ಹಾಗೆಯೇ ಅವರು ರಾಷ್ಟ್ರೀಯವಾದಿ ರಾಜಕಾರಿಣಿ, ಬಡವರ ಆಶಾಕಿರಣ, ನಿರ್ಣಯ ತೆಗೆದುಕೊಳ್ಳುವ (decisive leader ) ಧುರೀಣ, ಪ್ರತಿಯೊಂದು ವಿಚಾರದಲ್ಲೂ ಸಮಸ್ಯೆಗಳಿದ್ದರೂ ನಿಭಾಯಿಸುತ್ತಾರೆ ಎಂದೆಲ್ಲಾ ಹೇಳಿದರಂತೆ. ಅವರ ಈ ಬಣ್ಣನೆ ಅವರ ಪಕ್ಷದ ಹಲವರಿಗೇ ಇಷ್ಟವಾಗಲಿಲ್ಲವಂತೆ ಮತ್ತು ಅದರ ಬಗ್ಗೆ ಚರ್ಚೆ ಕೂಡಾ ಅಗುತ್ತಿದೆಯಂತೆ. ಅ ಮಾತು ಬೇರೆ. ಇಂತಹ ಮಾತುಗಳಿಗೆ ಅದು ಸಂದರ್ಭವೂ ಆಗಿರಲಿಲ್ಲ ಎಂದು ಮಾಧ್ಯಮವು ಮಾರ್ಮಿಕವಾಗಿ ಪ್ರತಿಕ್ರಿಯಿಸಿದೆಯಂತೆ. ಕೆಳಹಂತದ ಕಾರ್ಯಕರ್ತರು ಇಂತಹ ಬಣ್ಣನೆಗಳನ್ನು ಮಾಡಿದರೆ, ಅದಕ್ಕೊಂದು ಅರ್ಥ ಇರುತ್ತದೆ. ಆದರೆ, ಸುಮಾರು ಮೂರು ದಶಕಗಳ ಇತಿಹಾಸ ಇರುವ ರಾಜಕಾರಿಣಿಯೊಬ್ಬರು ಈ ರೀತಿ ಮಾತನಾಡಿದರೆ ಜನಸಾಮಾನ್ಯರು ಇದನ್ನು ಅರ್ಥೈಸುವ ಬಗೆಯೇ ಬೇರೆ ಇರುತ್ತದೆ. ಇದನ್ನು between the lines ಓದುತ್ತಾರೆ ಮತ್ತು ಅದರಲ್ಲಿ ಹುದುಗಿರುವ ಅಗೋಚರವಾದ ಅಜೆಂಡಾವನ್ನು ಹುಡುಕುತ್ತಾರೆ.

 ರಾಜಕೀಯದ ಒಳ ಹರಿವುಗಳನ್ನು ಹತ್ತಿರದಿಂದ ನೋಡುವ ಕೆಲವು ರಾಜಕೀಯ ವೀಕ್ಷಕರು ಮತ್ತು ಹಿರಿಯ ಪತ್ರಕರ್ತರ ಪ್ರಕಾರ, ನಾಯ್ಡು ಅವರ ರಾಜ್ಯಸಭಾ ಅವ ಸದ್ಯದಲ್ಲಿಯೇ ಮುಗಿಯಲಿದ್ದು, ಅವರು ರಾಜ್ಯಸಭೆಗೆ spring board  ಹುಡುಕುವಿಕೆಯಲ್ಲಿ ಇದ್ದಾರೆ. ಅವರು ತಮ್ಮ ಈವರೆಗಿನ ರಾಜಕೀಯವನ್ನು ರಾಜ್ಯಸಭೆಯ ಮೂಲಕ ಮಾಡಿದ್ದಾರೆ ವಿನಃ, ನೇರವಾದ ಚುನಾವಣೆಯನ್ನು ಎದುರಿಸಲಿಲ್ಲ. ಸದ್ಯ ಯಾವುದೇ ನೇರ ಚುನಾವಣೆಯ ಅವಕಾಶಗಳು ಇರುವುದಿಲ್ಲ. ಅವರ ರಾಜ್ಯದಲ್ಲಿ ಭಾಜಪ ಬೋರ್ಡ್‌ಗೆ ಇರುವುದಿಲ್ಲ ಮತ್ತು ಈ ವರೆಗೂ ಆರಿಸಿ ಬರುತ್ತಿರುವ ಕರ್ನಾಟಕದಿಂದ ಸದ್ಯದ ಪರಿಸ್ಥಿತಿಯಲ್ಲಿ ದೃಶ್ಯಾವಳಿ ಸ್ಪಷ್ಟವಾಗಿಲ್ಲ. ಅವರ ಮುಂದಿನ ರಾಜಕೀಯಕ್ಕೆ ಸದ್ಯ ಮೋದಿಯೇ ಅಸರೆ. ಅಂತೆಯೇ ಅವರಿಗೆ ಈಗ ಮೋದಿಯೇ ಏಕೈಕ ದಾರಿ. ಅವರ ಮುಂದಿನ ರಾಜಕೀಯ ಮತ್ತು ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಅವರ ಪುನರ್ವಸತಿ ಮೋದಿಯವರ ಕೈಯಲ್ಲಿ ಇದೆ.

 ಈ ರೀತಿಯ ರಾಜಕೀಯ ವ್ಯಕ್ತಿ ಪೂಜೆ ಎಡ ಪಕ್ಷಗಳನ್ನು ಬಿಟ್ಟು ಬಹುತೇಕ ಎಲ್ಲಾ ಪಕ್ಷಗಳಲ್ಲಿ ತೀರಾ ಸಾಮಾನ್ಯ. ಎಡ ಪಕ್ಷಗಳಲ್ಲಿ ವ್ಯಕ್ತಿಗಳಿಗಿಂತ ತತ್ವ ಅದರ್ಶಗಳು ಮುಖ್ಯ. ಜ್ಯೋತಿ ಬಸು ಮಹಾನ್ ಧುರೀಣರಾದರೂ, ತತ್ವ ಅದರ್ಶಗಳಿಗಾಗಿ ಪ್ರಧಾನ ಮಂತ್ರಿ ಪದವಿಯನ್ನೇ ಅವರು ತ್ಯಾಗ ಮಾಡಿದರು. ಪ್ರಾದೇಶಿಕ ರಾಜಕೀಯ ಪಕ್ಷಗಳಲ್ಲಿ ಈ ವ್ಯಕ್ತಿ ಪೂಜೆ ಮತ್ತು ಕುಟುಂಬ ರಾಜಕಾರಣ ಅಸಹ್ಯಪಡುವಷ್ಟು, ಎಂದಿಗೂ ಕೊನೆಗಾಣದಷ್ಟು, ತಾಳ್ಮೆಯನ್ನು ಪರೀಕ್ಷಿಸುವಷ್ಟು ಬೆಳೆದಿದೆ. ಪ್ರಾದೇಶಿಕ ಪಕ್ಷಗಳು ಹುಟ್ಟಿದ್ದೇ ವ್ಯಕ್ತಿ ಪೂಜೆಯ ತಳಹದಿಯ ಮೇಲೆ. ಜಯಲಲಿತಾ, ಕರುಣಾನಿ, ಮಮತಾ, ಮಾಯಾವತಿ, ಮುಲಾಯಂ ಸಿಂಗ್ ಇವರ ರಾಜಕೀಯ ಬೆಳವಣಿಗೆಯಲ್ಲಿ ವ್ಯಕ್ತಿ ಪೂಜೆಯ ಪಾತ್ರ ಬಹು ಮುಖ್ಯವಾಗಿದೆ. ಇಂತಹ ವ್ಯಕ್ತಿ ಪೂಜೆಗಳು ನಮ್ಮ ದೇಶದಲ್ಲಿ ಹೊಸ ಬೆಳವಣಿಗೆಯಲ್ಲ.

ರಾಜಮಹಾರಾಜರ ಕಾಲದಲ್ಲಿಯೂ ಇತ್ತು. ಆದರೆ, ಆ ಕಾಲದಲ್ಲಿ ಅದಕ್ಕೊಂದು ವೈಖರಿ ಇತ್ತು ಮತ್ತು ಅವುಗಳಿಗೆ ಇತಿ ಮಿತಿಗಳು ಇದ್ದು ಅದನ್ನು ದೊಡ್ಡವರಿಗೆ ಮತ್ತು ಹುದ್ದೆಗಳಿಗೆ ಗೌರವ ಕೊಡುವ ಸಂಕೇತವಾಗಿತ್ತು. ಅದರೆ, ಇಂದು, ಇದು ಮುಖಸ್ತುತಿ ಮಾಡಿ, ಹೊಗಳಿ ಹೊನ್ನ ಶೂಲಕ್ಕೇರಿಸಿ ಸ್ವಹಿತವನ್ನು ಕಾಪಾಡಿಕೊಳ್ಳುವ, ಪದವಿ ಪುರಸ್ಕಾರಗಳನ್ನು ಪಡೆಯುವ, ಪ್ರಸ್ತುತ ರಾಜಕೀಯದಲ್ಲಿ ಅಥವಾ ಭವಿಷ್ಯದಲ್ಲಿ ತಮ್ಮ ರಾಜಕೀಯ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ರಾಜಕೀಯ ತಂತ್ರದ ಭಾಗವಾಗಿದೆ.

  ಇಂತಹ ವ್ಯಕ್ತಿ ಪೂಜೆಗಳಲ್ಲಿ, ಜಾರ್ಜ್ ಫೆರ್ನಾಂಡಿಸ್ ಹೇಳುತ್ತಿದ್ದಂತೆ, ಮೊದಲು ಒಬ್ಬ ಧುರೀಣನನ್ನು ಅಯ್ಕೆ ಮಾಡಿಕೊಂಡು, ನಂತರ ಧುರೀಣತ್ವದ ಎಲ್ಲಾ ಗುಣಗಳನ್ನು ಅವರಲ್ಲಿ ತುಂಬಲಾಗತ್ತದೆ. ಕಾಲಕ್ರಮೇಣ ಅವರು ಧುರೀಣರಾಗಿ ಮಾರ್ಪಡುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ಇವು borrowed qualities ಇರುತ್ತವೇ ವಿನಹ inborn qualities  ಇರುವುದಿಲ್ಲ. ಕಟ್ಟಿಕೊಟ್ಟ ಬುತ್ತಿಯಂತೆ, ರಾಜಕೀಯದಲ್ಲಿ borrowed qualities ಹೆಚ್ಚುದಿನ ಇರುವುದಿಲ್ಲ. ಭಾರತದ ರಾಜಕೀಯದಲ್ಲಿ ಸ್ವಶಕ್ತಿಗಿಂತ,ವ್ಯಕ್ತಿ ಪೂಜೆ ಮಾಡಿ ಮೇಲೆ ಬಂದು ಮೆರಗುವವರ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಒಂದು ರೀತಿಯ ಹೆಚ್ಚು ಪರಿಶ್ರಮವಿಲ್ಲದ ಲ ಎನ್ನಬಹುದು.

share
ರಮಾನಂದ ಶರ್ಮಾ
ರಮಾನಂದ ಶರ್ಮಾ
Next Story
X