ಭಗತ್-ಸಖ್‌ದೇವ್-ರಾಜಗುರುಗೆ ಪ್ರಧಾನಿ ಮೋದಿ ನಮನ
ಹೊಸದಿಲ್ಲಿ, ಮಾ.23: ಹುತಾತ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜಗುರುಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಈ ಮಹಾನ್ ನಾಯಕರು, ತಮ್ಮ ನಂತರದ ಜನಾಂಗವು ಸ್ವಾತಂತ್ರದ ತಂಗಾಳಿಯನ್ನು ಉಸಿರಾಡುವುದಕ್ಕಾಗಿ ಮಹಾ ಬಲಿದಾನ ಮಾಡಿದ್ದಾರೆಂದು ಅವರು ಹೇಳಿದ್ದಾರೆ.
ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್‌ರಿಗೆ, ಅವರ ಹುತಾತ್ಮರಾದ ದಿನವಾದ ಇಂದು ತಲೆ ಬಾಗುತ್ತೇನೆ. ತಲೆ ಮಾರುಗಳಿಗೆ ಸ್ಫೂರ್ತಿ ನೀಡುವ ಅವರ ಅಸಾಧಾರಣ ಶೌರ್ಯ ಹಾಗೂ ದೇಶ ಭಕ್ತಿಗೆ ವಂದನೆ ಸಲ್ಲಿಸುತ್ತೇನೆಂದು ಪ್ರಧಾನಿ ತಿಳಿಸಿದ್ದಾರೆ.
ತಮ್ಮ ಆನಂತರದ ತಲೆಮಾರು, ಸ್ವಾತಂತ್ರದ ತಂಗಾಳಿಯನ್ನು ಉಸಿರಾಡಲು ಸಾಧ್ಯವಾಗುವಂತೆ ಈ ಮೂವರು ಸಾಹಸಿಗಳು ತಮ್ಮ ಯೌವನಾವಸ್ಥೆಯಲ್ಲೇ ಬಲಿದಾನ ಮಾಡಿದರೆಂದು ಅವರು ಟ್ವೀಟಿಸಿದ್ದಾರೆ.
Next Story





