ಪಠಾಣ್‌ಕೋಟ್: ಮೂವರು ಯುವಕರಿಂದ ಬಂದೂಕು ತೋರಿಸಿ ಕಾರು ಅಪಹರಣ
ಪಠಾಣ್‌ಕೋಟ್, ಮಾ.23: ಮೂವರು ಯುವಕರು ಬಂದೂಕು ತೋರಿಸಿ ಕಾರೊಂದನ್ನು ಅಪಹರಿಸಿದ ಘಟನೆ ಸುಜನ್‌ಪುರದ ಸಮೀಪ ಇಂದು ನಡೆದಿದೆ. ಕಳೆದ ತಿಂಗಳು ಪಠಾಣ್‌ಕೋಟ್ ವಾಯುನೆಲೆಗೆ ದಾಳಿ ನಡೆಸುವ ಮುನ್ನ ಪಾಕಿಸ್ತಾನಿ ಭಯೋತ್ಪಾದಕರು ಇದೇ ರೀತಿಯ ಕೃತ್ಯ ನಡೆಸಿದ್ದರು.
ಸಿಖ್ಖರೆಂದು ಶಂಕಿಸಲಾಗಿರುವ ಇಬ್ಬರ ಸಹಿತ ಮೂವರು ಯುವಕರು ಸುಜನ್‌ಪುರ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬನಿಗೆ ಬಂದೂಕು ತೋರಿಸಿ ಕಾರನ್ನು ಅಪಹರಿಸಿದ್ದಾರೆಂದು ಹಿರಿಯ ಪೊಲೀಸ್ ಅಧೀಕ್ಷಕ ಆರ್.ಕೆ. ಬಕ್ಷಿ ತಿಳಿಸಿದ್ದಾರೆ.
ತಡೆಬೇಲಿಗಳನ್ನು ಹಾಕಲಾಗಿದ್ದು, ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆಯೆಂದು ಅವರು ಹೇಳಿದ್ದಾರೆ.
ಜ.2ರಂದು ಪಠಾಣ್‌ಕೋಟ್ ವಾಯುನೆಲೆಗೆ ದಾಳಿ ಮಾಡುವ ಮುನ್ನ ಶಂಕಿತ ಪಾಕಿಸ್ತಾನ ಮೂಲದ ಜೈಶೆ ಮುಹಮ್ಮದ್ ಸಂಘಟನೆಯ 6 ಮಂದಿ ಭಯೋತ್ಪಾದಕರು ಪಂಜಾಬ್ ಪೊಲೀಸ್ ಅಧೀಕ್ಷಕ ಸಲ್ವಿಂದರ್ ಸಿಂಗ್‌ರ ವಾಹನವನ್ನು ಅಪಹರಿಸಿದ್ದರು.
Next Story





