ದಲಿತರ ಜಮೀನು ಅತಿಕ್ರಮಣ: ಆರೋಪ
ಬೆಳ್ತಂಗಡಿ, ಮಾ.23: ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಕೇಪ್ಲಗುಡ್ಡೆ ಎಂಬಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ರುದ್ರಭೂಮಿಗಾಗಿ ಮೀಸಲಿರಿಸಿದ 1.35 ಎಕರೆ ಜಮೀನನ್ನು ಆಕ್ರಮಿಸಿ ಸ್ಥಳೀಯ ಕೆಲವರು ರಬ್ಬರ್ ತೋಟ ನಿರ್ಮಿಸಿರುವುದಾಗಿ ಚಾರ್ಮಾಡಿ ನಿವಾಸಿ ಆನಂದ ಮೊಗೇರ ಸಹಾಯಕ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ವರ್ಷಗಳ ಹಿಂದೆ ಈ ಜಮೀನನ್ನು ರುದ್ರಭೂಮಿಗೆಂದು ಮೀಸಲಿರಿಸಲಾಗಿತ್ತು. ಕೆಲ ಅಧಿಕಾರಿಗಳ ಸಹಾಯದೊಂದಿಗೆ ಸ್ಥಳಿಯ ಪ್ರಭಾವಿ ವ್ಯಕ್ತಿಯೋರ್ವರು ಜಮೀನನ್ನು ಆಕ್ರಮಿಸಿಕೊಂಡಿದ್ದಾರೆ. ಇದು ಪ.ಜಾ.,ಪಂ.ದವರಿಗೆ ಮಾಡಿರುವ ಅನ್ಯಾಯವಾಗಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
Next Story





