Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೆಗೆಟಕುವ ದರದ ಐಫೋನ್‌ಗೆ ರೂ. 39,000!

ಕೆಗೆಟಕುವ ದರದ ಐಫೋನ್‌ಗೆ ರೂ. 39,000!

ಮೂಗಿಗೆ ತುಪ್ಪಹಚ್ಚಿದಆ್ಯಪಲ್‌ನ ಹೊಸ ಮೊಬೈಲ್ ಬಗ್ಗೆ ಭಾರತೀಯರಲ್ಲಿ ನಿರಾಸಕ್ತಿ

ವಾರ್ತಾಭಾರತಿವಾರ್ತಾಭಾರತಿ23 March 2016 11:56 PM IST
share

ನವದೆಹಲಿ, ಮಾ.23  : ಆ್ಯಪಲ್ ತನ್ನ 4 ಇಂಚಿನ ಅಗ್ಗದ ಐಫೋನ್ ಬಿಡುಗಡೆ ಮಾಡಿ ಬಹಳ ಸುದ್ದಿಯಲ್ಲಿದ್ದರೂ, ಅಮೆರಿಕಾದಲ್ಲಿ 16 ಜಿಬಿ ಸಾಮರ್ಥ್ಯದ ಐಫೋನ್‌ಎಸ್‌ಇ399(ರೂ 27,500)ಗೆ ದೊರೆಯುವುದಾದರೆ ಭಾರತದಲ್ಲಿ ಇದೇ ಫೋನ್ ಎಪ್ರಿಲ್ 8ರಿಂದ ರೂ 39,000ಕ್ಕೆ ದೊರೆಯಲಿದ್ದು ಆ್ಯಪಲ್‌ನ ಭಾರತೀಯ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆಯುಂಟು ಮಾಡಿದೆ. ಅದೇ ಸಮಯ 64 ಜಿಬಿ ಐಫೋನ್‌ನ ಬೆಲೆ ಅಮೆರಿಕಾದಲ್ಲಿ 499 (ರೂ 34,000) ಎಂದು ಈಗಾಗಲೇ ಘೋಷಿತವಾಗಿದ್ದರೂ ಭಾರತದಲ್ಲಿ ಅದರ ದರವನ್ನು ನಿಗದಿಪಡಿಸಲಾಗಿಲ್ಲ.
ಆ್ಯಪಲ್ ಐಫೋನ್ ವಿತರಕರಾದ ರೆಡಿಂಗ್ಟನ್ ಎಂಡ್ ಬೀಟೆಲ್ ಪ್ರಕಾರ ಬುಕ್ಕಿಂಗ್ ಮಾರ್ಚ್ 29ರ ಮಧ್ಯರಾತ್ರಿಯಿಂದ ಆರಂಭವಾಗುವುದು. ಆದರೆ ಒಂದಂತೂ ನಿಜ, ಭಾರತೀಯ ರಿಟೇಲರುಗಳೂ ಈ ಐಫೋನ್ ಕನಿಷ್ಠ ರೂ.22,000ಕ್ಕೆ ದೊರೆಯಬಹುದೆಂದು ನಿರೀಕ್ಷಿಸಿದ್ದರು. ಮುಂದಿನ ಒಂದು ದಶಕದ ಅವಧಿಯಲ್ಲಿ ಆ್ಯಪಲ್ ಭಾರತವನ್ನು ತನ್ನ ಅಭಿವೃದ್ಧಿ ಪಥದ ಪ್ರಮುಖ ಭಾಗವಾಗಿ ಪರಿಗಣಿಸುವುದೆಂದು ಆ್ಯಪಲ್‌ನ ಮುಖ್ಯ ಕಾರ್ಯನಿರ್ವಾಹಕ ಟಿವ್ ಕ್ರುಕ್ ಇತ್ತೀಚೆಗೆಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆ್ಯಪಲ್‌ಭಾರತದಲ್ಲಿ ರಿಟೇಲ್ ಸ್ಟೋರುಗಳನ್ನು ತೆರೆಯುವ ಬಗ್ಗೆ ಯೋಚಿಸುತ್ತಿದ್ದರೂ ರಿಟೇಲರುಗಳುಹೊಸ ಐಫೋನ್ ಎಸ್‌ಇ ನಿರೀಕ್ಷೆಗೂ ಮೀರಿ ಮಾರಾಟವಾಗುವುದೆಂಬ ಭರವಸೆ ಯಿಲ್ಲ. ಐಫೋನ್ ಎಸ್‌ಇಯ ಮಾರಾಟ ಹಿಂದಿನ ಐಫೋನ್ 5ಸಿ ಮಾಡೆಲ್‌ನಂತೆಯೇ ಕುಗ್ಗಬಹುದು ಎಂಬುದು ಅವರ ಅನಿಸಿಕೆ.
‘‘ಹಿಂದೆಲ್ಲಾ ಐಫೋನ್ ಬಿಡುಗಡೆ ಯಾಗುವ ಸಂದರ್ಭದಲ್ಲಿ ಗ್ರಾಹಕರು ಪ್ರಿ-ಬುಕ್ಕಿಂಗ್ ಬಗ್ಗೆ ಅತ್ಯುತ್ಸಾಹ ತೋರಿಸುತ್ತಿದ್ದರು. ಆದರೆ ಈ ಬಾರಿ ಹಾಗಲ್ಲ,’’ ಎಂದು ರಿಟೇಲ್ ಮಾರಾಟಗಾರರೊಬ್ಬರು ಹೇಳಿದ್ದಾರೆ. ಈ ಹಿಂದೆ ಕೂಡ ಆ್ಯಪಲ್ ತನ್ನ ಐಫೋನ್ 6ಎಸ್ ಹಾಗೂ 6 ಎಸ್ ಪ್ಲಸ್ ದರವನ್ನು ಅಮೆರಿಕಾದಲ್ಲಿನ ದರಕ್ಕಿಂತ ರೂ 14,000 ದಿಂದ ರೂ 16,000 ಹೆಚ್ಚು ನಿಗದಿಪಡಿಸಿತ್ತಲ್ಲದೆನಂತರ ಗ್ರಾಹಕರ ನಿರುತ್ಸಾಹವನ್ನು ಗಮನಿಸಿ ಬೈಬ್ಯಾಕ್ ಸ್ಕೀವ್ ಹಾಗೂ ಇನ್ನಿತರ ರೀತಿಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಯತ್ನಿಸಿತ್ತು.
ಇದೀಗ ತನ್ನ ಐಫೋನ್ ಎಸ್‌ಇ ವಿಚಾರದಲ್ಲೂ ಆ್ಯಪಲ್ ಗ್ರಾಹಕರ ಮೂಗಿಗೆ ತುಪ್ಪ ಸವರುವ ಯತ್ನ ವಾಡುತ್ತಿದೆಯೆಂಬುದು ಹಲವರ ಅಭಿಪ್ರಾಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X