ಪಿಯುಸಿ ಪರೀಕ್ಷೆ: ದ.ಕ.-104, ಉಡುಪಿ-27 ಗೈರು
ಉಡುಪಿ/ಮಂಗಳೂರು, ಮಾ.23: ಉಡುಪಿ ಜಿಲ್ಲೆಯ 29 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಂದು ನಡೆದ ಹಿಂದಿ ಪರೀಕ್ಷೆಗೆ ಒಟ್ಟು 27 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಪರೀಕ್ಷೆಗಾಗಿ ಹೆಸರು ನೋಂದಾಯಿಸಿಕೊಂಡ ಒಟ್ಟು 3,545 ವಿದ್ಯಾರ್ಥಿಗಳಲ್ಲಿ 3,518 ಮಂದಿ ಇಂದು ಪರೀಕ್ಷೆ ಬರೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬುಧವಾರ ನಡೆದ ಹಿಂದಿ ವಿಷಯದ ಪರೀಕ್ಷೆಗೆ 9,654 ವಿದ್ಯಾರ್ಥಿಗಳು ಹಾಜರಾಗಿ, 104 ಮಂದಿ ಗೈರು ಹಾಜರಾಗಿದ್ದಾರೆ ಎಂದು ಪಪೂ ಶಿಕ್ಷಣ ಇಲಾಖೆಯ ಪ್ರಕಟನೆ ತಿಳಿಸಿದೆ.
Next Story