ಇಪ್ಪತ್ತು ವರ್ಷಗಳ ನಂತರ ಈ ಗ್ರಾಮ ಸ್ವಾತಂತ್ರ್ಯ ಅನುಭವಿಸುತ್ತಿದೆ!

ಫಾಜ್ಲಿಕಾ,(ನಾಗಪಾಲ್, ಲೀಲಾಧರ್) ಮಾರ್ಚ್.24: ಭಾರತ ಪಾಕಿಸ್ತಾನ ಗಡಿಯಲ್ಲಿರುವ ಗ್ರಾಮ ಜಮ್ಶೇರ್‌ನ ನಿವಾಸಿಗಳು ಇಂದು ಎರಡು ದಶಕಗಳ ನಂತರ ಸ್ವಾತಂತ್ರ್ಯದ ಸವಿಯನ್ನು ಅನುಭವಿಸುವಂತಾಗಿದೆ. ಗಡಿಭದ್ರತಾ ಪಡೆಗಳು ಗ್ರಾಮದ ಪ್ರವೇಶಭಾಗದಲ್ಲಿ ಹೊಗಿಬರುವ ಗ್ರಾಮ ನಿವಾಸಿಗಳ ತಪಾಸಣೆಗಾಗಿ ಇಟ್ಟಿದ್ದ ಚೆಕ್ಕಿಂಗ್(ತಪಾಸಣೆ) ಗೇಟ್‌ನ್ನು ಇಂದು ಅಧಿಕೃತವಾಗಿ ತೆರವುಗೊಳಿಸಿರುವುದು ಗ್ರಾಮನಿವಾಸಿಗಳ ಸಂತೋಷಕ್ಕೆ ಕಾರಣವಾಗಿದೆಯೆಂದು ವರದಿಯಾಗಿದೆ. ಮೂರು ಕಡೆಯಿಂದ ಪಾಕಿಸ್ತಾನದಿಂದ ಸುತ್ತುವರಿದಿರುವ ಮುಹಾರ್ ಜಮ್ಶೇರ್ ಸುಮಾರು 1000 ಎಕ್ರೆ ಭೂಮಿ ವಿಸ್ತೀರ್ಣದಲ್ಲಿಹರಡಿದೆ. ಇದರ ಮೂರು ಭಾಗಗಳಲ್ಲಿ ಮುಳ್ಳಿನ ಬೇಲಿ ಹಾಕಿಡಲಾಗಿದೆ. ನಾಲ್ಕನೆ ಬದಿಯಲಿ ಸಟ್ಲೆಜ್ ನದಿ ಹರಿಯುತ್ತಿದೆ. ಬಹಳವರ್ಷಗಳ ಸಂಘರ್ಷದ ನಂತರ ನದಿಗೆ ಎರಡು ವರ್ಷಗಳ ಹಿಂದೆ ಸೇತುವೆಯನ್ನು ಕಟ್ಟಲಾಗಿದ್ದು ಅದು ಭಾರತದೊಂದಿಗೆ ಗ್ರಾಮಗಳನ್ನು ಜೋಡಿಸುತ್ತಿದೆ.
ನದಿಯ ಈ ಕಡೆಯಲ್ಲಿಯೂ ಸರಕಾರದ ವತಿಯಿಂದ ಎರಡು ದಶಕಗಳ ಹಿಂದೆ ಮುಳ್ಳಿನ ಬೇಲಿಯನ್ನು ಹಾಕಿದ್ದು ಪ್ರವೇಶದ್ವಾರವನ್ನು ಇರಿಸಲಾಗಿತ್ತು. ಆನಂತರ ಗಡಿಭದ್ರತಾ ಪಡೆ ಗ್ರಾಮಗಳಿಗೆ ಬಂದು ಹೋಗುವವರ ತಪಾಸಣೆಯಲ್ಲಿ ನಿರತವಾಗಿವೆ. ಮತ್ತು ಸಂಜೆಯ ನಂತರ ಮರುದಿನ ಬೆಳಗ್ಗೆವರೆಗೆ ಗ್ರಾಮ ನಿವಾಸಿಗಳು ಬಂಧಿಗಳಂತೆ ಬದುಕುವುದು ಅನಿವಾರ್ಯವಾಗಿತ್ತು. ಈ ತಪಾಸಣಾ ಗೇಟನ್ನು ತೆರವುಗೊಳಿಸಬೇಕೆಂದು ಗ್ರಾಮೀಣರು ಬಹುದಿನಗಳ ಹಿಂದಿನಿಂದಲೇ ಬೇಡಿಕೆಯಿಡುತ್ತಾ ಬಂದಿದ್ದರು. ಇದೀಗ ಗಡಿಭದ್ರತಾ ಪಡೆಯ ಕಮಾಡೆಂಟ್ ಎಸ್.ಬಿ.ಮುಖರ್ಜಿ ಔಪಚಾರಿಕವಾಗಿ ರಿಬ್ಬನ್ ಕತ್ತರಿಸುವ ಮೂಲಕ ಈ ಬೇಡಿಕೆಯನ್ನು ಈಡೇರಿಸಲು ನಾಂದಿ ಹಾಡಿದ್ದಾರೆ. ಗ್ರಾಮದ ಸರಪಂಚ್ ಛೀನಾ ಸಿಂಗ್‌ರು ಈ ಕುರಿತು ಪ್ರತಿಕ್ರಿಯಿಸುತ್ತಾ ಇದರಿಂದ ಗ್ರಾಮ ನಿವಾಸಿಗಳಿಗೆ ಸಂತೋಷವಾಗಿದೆ. ಈಗ ಗ್ರಾಮ ಬಯಸಿದಾಗ ಬಂದು ಹೋಗಲು ಅವಕಾಶವಿದೆ. ಕಮಾಡೆಂಟ್ ಮುಖರ್ಜಿಯ ಮುಂದಾಳುತ್ವದಲ್ಲಿ ಗ್ರಾಮನಿವಾಸಿಗಳು ತಮ್ಮ ಸ್ವಾತಂತ್ರ್ಯವನ್ನು ಅನುಭವಿಸುವಂತಾಗಿದೆ. ಅವರು ಗಡಿಭದ್ರತಾ ಪಡೆ ಗ್ರಾಮ ನಿವಾಸಿಗಳೊಂದಿಗೆ ಯಾವಾಗಲೂ ಸಹಕರಿಸಲಿದೆ ಎಂದು ಭರವಸೆಯನ್ನು ನೀಡಿದ್ದಾರೆ.







