ಕಿರಿಕ್ ಪ್ರಶ್ನೆ : ಪತ್ರಕರ್ತನ ಬಾಯಿ ಮುಚ್ಚಿಸಿದ ಧೋನಿ

ನವದೆಹಲಿ : ಬುಧವಾರ ಟೀಂ ಇಂಡಿಯಾ ನಾಯಕ ಎಂ ಎಸ್ ಧೋನಿ ಪಾಲಿಗೆ ಬಿಡುವಿಲ್ಲದ ಕಾರ್ಯಗಳ ದಿನವಾಗಿತ್ತು. ಭಾರತ-ಬಾಂಗ್ಲಾದೇಶಗಳ ನಡುವೆ ನಡೆದ ಟಿ-20 ಪಂದ್ಯವಂತೂ ರೋಚಕ ಅಂತ್ಯ ಕಂಡು ಭಾರತ ಒಂದು ರನ್ ಅಂತರದಲ್ಲಿ ವಿಜಯಿಯಾಗಿತ್ತು.
ಪಂದ್ಯದ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಿರಿಕ್ ಪ್ರಶ್ನೆಯೊಂದನ್ನು ಕೇಳಿದ ಪತ್ರಕರ್ತನೊಬ್ಬನಿಗೆ ಕ್ಯಾಪ್ಟನ್ ಕೂಲ್ ತಕ್ಕ ಉತ್ತರ ನೀಡಿ ಆತನ ಬಾಯಿ ಮುಚ್ಚಿಸಿದ್ದಾರೆ.
ಪತ್ರಕರ್ತನ ಪ್ರಶ್ನೆ ಹೀಗಿತ್ತು : ‘‘ಪಂದ್ಯದ ಮೊದಲು ನಾವು ನಮ್ಮ ಒಟ್ಟು ರನ್-ರೇಟ್ಸುಧಾರಿಸುವ ಸಲುವಾಗಿ ದೊಡ್ಡ ವಿಜಯಸಾಧಿಸಬೇಕು ಎಂದು ಮಾತನಾಡುತ್ತಿದ್ದೆವು. ಆದರೆ ಈಗ ನಾವುಹೇಗೆ ಕಷ್ಟ ಪಟ್ಟು ವಿಜಯ ಸಾಧಿಸಿದ್ದೇವೆ ನೋಡಿ.ಈ ವಿಜಯದಿಂದ ನೀವು ಎಷ್ಟು ಸಂತುಷ್ಟರಾಗಿದ್ದೀರಿ? ಎರಡನೆಯ....
(ಅಷ್ಟರಲ್ಲಿ ಈ ಪತ್ರಕರ್ತನ ಮಾತನ್ನು ಧೋನಿ ಅರ್ಧದಲ್ಲೇ ತುಂಡರಿಸುತ್ತಾರೆ)
‘‘ಒಂದು ಬಾರಿ ಒಂದೇ ಪ್ರಶ್ನೆ,’’ ಧೋನಿಮರು ಉತ್ತರನೀಡಿ ‘‘ಇಂದಿನ ನಮ್ಮ ವಿಜಯದಿಂದ ನೀವು ಸಂತುಷ್ಟರಾಗಿಲ್ಲವೆಂದು ನನಗೆ ಗೊತ್ತು.’’
(ಪತ್ರಕರ್ತ ಸ್ಪಷ್ಟೀಕರಣ ನೀಡಲು ಯತ್ನಿಸಿದಾಗ ಧೋನಿ ಆತನನ್ನು ಮತ್ತೆ ತಡೆಯುತ್ತಾರೆ).
‘‘ನಾನು ಹೇಳುವುದನ್ನು ಕೇಳಿ. ನಿಮ್ಮಪ್ರಶ್ನೆ ಹಾಗೂ ನೀವು ಅದನ್ನು ಕೇಳಿದ ಧಾಟಿಯನ್ನು ನೋಡಿದಾಗ, ಭಾರತ ಗೆದ್ದಿದ್ದು ನಿಮಗೆ ಸಂತೋಷ ತಂದಿಲ್ಲವೆಂಬುದು ಸ್ಪಷ್ಟ. ಮತ್ತೆ ಕ್ರಿಕೆಟ್ ಪಂದ್ಯದ ಬಗ್ಗೆ ಮಾತನಾಡುವಾಗ ಅಲ್ಲಿಯಾವುದೇ ಸ್ಕ್ರಿಪ್ಟ್ ಇಲ್ಲ. ಟಾಸ್ ಸೋತ ನಂತರ ಮೊದಲು ಬ್ಯಾಟ್ ಮಾಡಿದ ನಾವು ಅದೇಕೆ ಹೆಚ್ಚು ರನ್ ಪಡೆಯಲಾಗಿಲ್ಲವೆಂಬುದನ್ನು ನೀವು ಪರಾಮರ್ಶಿಸಬೇಕು. ಹೊರಗೆ ಕುಳಿತುಕೊಂಡು ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ನೀವು ಯತ್ನಿಸುತ್ತಿಲ್ಲವೆಂದಾದರೆ, ಈ ಪ್ರಶ್ನೆಯನ್ನು ನೀವು ಕೇಳಬಾರದು.’’
ಪತ್ರಕರ್ತನ ಪ್ರಶ್ನೆಗೆ ಧೋನಿ ಸರಿಯಾಗಿಯೇ ಮಾತಿನೇಟು ನೀಡಿದ್ದಾರೆಂದು ಅನಿಸುವುದಿಲ್ಲವೇ?







