ಕಾಸರಗೋಡು: ಮಾ.27ರಂದು ವಿಶ್ವ ರಂಗ ದಿನಾಚರಣೆ

ಕಾಸರಗೋಡು, ಮಾ.24: ಕರ್ನಾಟಕ ನಾಟಕ ಅಕಾಡಮಿಯ ಪ್ರಾಯೋಜಕತ್ವದಲ್ಲಿ ಕಲಾ ಸಂಘ ಪ್ರತಿಷ್ಠಾನ ಸಹಯೋಗದೊಂದಿಗೆ ವಿಶ್ವರಂಗ ದಿನಾಚರಣೆ ಮಾ. 27 ರಂದು ಪಿಲಿಕುಂಜೆ ಸಂಧ್ಯಾರಾಗಂಬಯಲು ರಂಗ ಮಂದಿರದಲ್ಲಿ ನಡೆಯಲಿದೆ .
ಸಂಜೆ 5.30 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ರಂಗ ನಿರ್ದೆಶಕ ಪ್ರದೀಪ್ ಚಂದ್ರ ಕುತ್ಪಾಡಿ ಉದ್ಘಾಟಿಸುವರು .
ಹಿರಿಯ ರಂಗ ಕಲಾವಿದ ಎಸ್ . ಜಗನ್ನಾಥ ಶೆಟ್ಟಿ ಅಧ್ಯಕ್ಷೆತೆ ವಹಿಸುವರು . ಬಳಿಕ ರಂಗ ಭೂಮಿ ಉಡುಪಿ ಕಲಾವಿದರಿಂದ ನಾಗಮಂಡಲ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ . ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ನಾಟಕ ಅಕಾಡಮಿ ಸದಸ್ಯ ಉಮೇಶ್ ಸಾಲಿಯಾನ್ , ದಿವಾಕರ , ಭಾರತಿ ಬಾಬು , ಸುರೇಖಾ ದಿವಾಕರ್ ,ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು .
Next Story





