ಇಡಿಯಿಂದ ಹಿಮಾಚಲ ಮುಖ್ಯಮಂತ್ರಿ ವೀರಭದ್ರ ಸಿಂಗ್‌ರ ಎಂಟು ಕೋ.ರೂ. ಸಂಪತ್ತು ಜಪ್ತಿಗೆ ಆದೇಶ

ಹಿಮಾಚಲ ಪ್ರದೇಶ,ಮಾ24: ಬುಧವಾರ ಜಾರಿ ನಿರ್ದೇಶನಾಲಯವು ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ)ಪ್ರಕರಣದಲ್ಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರಸಿಂಗ್‌ರಿಗೆ ಸೇರಿ ಸುಮಾರು ಎಂಟು ಕೋಟಿ ರೂಪಾಯಿಯ ಸೊತ್ತುಗಳನ್ನು ವಶಪಡಿಸಿಕೊಂಡಿದೆ.ಇದರಲ್ಲಿ ದಿಲ್ಲಿಯ ಐಶಾರಾಮಿ ಕಾಲನಿಯಲ್ಲಿರುವ ವಸತಿಯೂ ಸೇರಿದೆ ಎಂದು ವರದಿಯಾಗಿದೆ. ಇಡಿ ಮನಿಲಾಂಡರಿಂಗ್ ಪ್ರಕರಣದಲ್ಲಿ ವೀರಭದ್ರಸಿಂಗ್ ಮತ್ತು ಇತರರ ವಿರುದ್ಧ ತನಿಖೆ ನಡೆಸುತ್ತಿದೆ.
ತನಿಖಾ ಸಂಸ್ಥೆ ಬುಧವಾರ ಫ್ರಿವೆನ್ಸನ್ ಆಫ್ ಮನಿಲಾಂಡರಿಂಗ್ ಆ್ಯಕ್ಟ್(ಪಿಎಂಎಲ್‌ಎ) ಪ್ರಕಾರ ಸೊತ್ತುಗಳನ್ನು ವಶಪಡಿಸಿಕೊಳ್ಳುವ ಆದೇಶ ಜಾರಿ ಮಾಡಿದೆ. ಮತ್ತು ಹಲವು ಜೀವನ್‌ಬಿಮಾ ಪಾಲಿಸಿ, ಬ್ಯಾಂಕ್ ಫಿಕ್ಸೆಡ್ ಡಿಫಾಸಿಟ್ ಸಹಿತ ದಿಲ್ಲಿಯ ಗ್ರೇಟರ್ ಕೈಲಾಶ್-1ರಲ್ಲಿರುವ ಎರಡು ಅಂತಸ್ತಿನ ಮನೆಯನ್ನು ವಶಕ್ಕೆ ತೆಗೆದುಕೊಂಡಿದೆ. ಅಧಿಕೃತ ಮೂಲಗಳು ತಿಳಿಸಿರುವ ಪ್ರಕಾರ ಇಡಿಯು ಈ ಸೊತ್ತುಗಳನ್ನು ಮನಿಲಾಂಡರಿಂಗ್ ಗಳಿಕೆಯಾಗಿ ಗುರುತಿಸಿ ವಶಕ್ಕೆಆದೇಶಿಸಿತು ಎಂದು ವರದಿಯಾಗಿದೆ.
ಮೂಲಗಳು ಇಡಿ7.93ಕೋಟಿರೂ. ಮೌಲ್ಯದ ಸೊತ್ತುಗಳಿಗೆ ತಡೆಯಾಜ್ಞೆಯನ್ನೂ ನೀಡಿದೆ. ಪಿಎಂಎಲ್‌ಎ ಪ್ರಕಾರ ಜಾರಿ ನಿರ್ದೇಶನಾಲಯ ತಪ್ಪು ರೀತಿಯ ಸಂಪಾದನೆಗಾಗಿ ಈ ಆದೇಶವನ್ನು ಹೊರಡಿಸಿದ್ದು. ಆರೋಪಿ 180 ದಿನಗಳೊಳಗೆ ನಿರ್ಣಾಯಕ ಪ್ರಾಧಿಕಾರ(ಅಜುಕೇಟಿಂಗ್ ಅಥಾರಿಟಿಗೆ)ಕ್ಕೆ ಇಡಿಯ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ.





