ಹೈದರಾಬಾದ್‌ನಲ್ಲಿ ಕನ್ಹಯ್ಯಾ ಕುಮಾರ್ ಮೇಲೆ ಚಪ್ಪಲಿ ಎಸೆತ

ಹೈದರಾಬಾದ್, ಮಾ.24: ಜವಾಹರ್‌ಲಾಲ್ ನೆಹರೂ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೇಯಾ ಕುಮಾರ‍್ ಹೈದರಾಬಾದ್‌ನಲ್ಲಿ ಇಂದು ಬೆಳಗ್ಗೆ ವಿಚಾರ ಸಂಕಿರಣವೊಂದರಲ್ಲಿ ಮಾತನಾಡುತ್ತಿದ್ದಾಗ ಅವರ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಘಟನೆ ನಡೆದಿದೆ.
ಕನ್ನೇಯಾ ಕುಮಾರ‍್ ಅವರು ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಸಭೆಯಲ್ಲಿದ್ದ ಓರ್ವನು ಚಪ್ಪಲಿ ಎಸೆದಿದ್ದಾನೆ. ಕೂಡಲೇ ಸಂಘಟಕರು ಧಾವಿಸಿ ಬಂದು ಕನ್ನೇಯಾ ಕುಮಾರ್‌ಗೆ ರಕ್ಷಣೆಗೆ ನೀಡಿದ್ದಾರೆ.
ಕನ್ನೇಯಾ ಕುಮಾರ‍್ ಜೆಎನ್‌ವಿವಿಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟು ಜೈಲಿನಿಂದ ಜಾಮೀನು ಮೂಲಕ ಹೊರಬಂದ ಬಳಿಕ ಹೈದರಾಬಾದ್ ಮತ್ತು ವಿಜಯಾವಾಡಕ್ಕೆ ಎರಡು ದಿನಗಳ ಭೇಟಿಗೆ ಬುಧವಾರ ಆಗಮಿಸಿದ್ದರು. ಆದರೆ ಬುಧವಾರ ಸಂಜೆ ಹೈದರಾಬಾದ್ ವಿವಿ ಆವರಣ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿತ್ತು.
Next Story





