1ಕೋಟಿ ರೂ. ಬಹುಮಾನದ ಕುಸ್ತಿ ಗೆದ್ದ ಹರ್ಯಾಣದ ಪೋಲಿಸಪ್ಪ ಮೌಸಮ್ ಖತ್ರಿ

ಹರಿಯಾಣ, ಮಾರ್ಚ್.24: ಹರಿಯಾಣದ ಪೈಲ್ವಾನ್ ಮೌಸಮ್ ಖತ್ರಿ ಭಾರತ್ ಕೇಸರಿ ಕುಸ್ತಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಬುಧವಾರ ಭಾರತ್ ಕೇಸರಿ-2016 ಕುಸ್ತಿ ಸ್ಪರ್ಧೆ ಬುಧವಾರ ಗುಡ್‌ಗಾಂವ್‌ನಲ್ಲಿ ನಡೆದಿತ್ತು. ಖತ್ರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ತನ್ನ ಸ್ಕಿಲ್‌ನ್ನು ಹೆಚ್ಚಿಸಲಿಕ್ಕಾಗಿ ಈ ಹಣವನ್ನು ಬಳಸುವುದಾಗಿ ಖತ್ರಿ ಹೇಳಿದ್ದಾರೆ. ಇಪ್ಪತ್ತಾರು ವರ್ಷದ ಖತ್ರಿ ರೈಲ್ವೆ ಪ್ರೊಮೋಶನ್ ಬೋರ್ಡ್‌ನ ಸುಮಿತ್ ಕುಮಾರ್‌ರನ್ನು ಸೋಲಿಸಿದ್ದಾರೆ. ಸುಮಿತ್ ಕುಮಾರ್‌ಗೆ ಐವ್ತು ಲಕ್ಷರೂ. ಬಹುಮಾನ ಸಿಗಲಿದೆ.
ಹರ್ಯಾಣದ ಝಜ್ಜಾರ್‌ನ ಸತ್ಯವ್ರತ್ ಮೂರನೆ ಸ್ಥಾನ ಪಡೆದಿದ್ದಾರೆ. ಅವರಿಗೆ ಇಪ್ಪತ್ತೈದು ಲಕ್ಷ ರೂ. ಬಹುಮಾನ ಸಿಗಲಿದೆ. ನಾಲ್ಕನೆ ಸ್ಥಾನವನ್ನು ಪಂಜಾಬ್‌ನ ಗುರುಪಾಲ್ ಸಿಂಗ್ ಗೆದ್ದಿದ್ದಾರೆ ಅವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನ ದೊರಕಿದೆ. ಚಾಂಪಿಯನ್ ಶಿಪ್ ಗೆದ್ದಿರುವ ಮೌಸಮ್ ಖತ್ರಿಗೆ ಮನೋಹರಲಾಲ್ ಕಟ್ಟರ್ ಒಂದು ಕೋಟಿ ರೂಪಾಯಿ ಬಹುಮಾನವಲ್ಲದೆ ಗದೆ ನೀಡಿ ಸಮ್ಮಾನಿಸಿದ್ದಾರೆ. ಈ ಸ್ಪರ್ಧೆಯಲ್ಲಿ ದೇಶಾದ್ಯಂತದ ಎಪ್ಪತ್ತೆಂಟು ಕುಸ್ತಿಪಟುಗಳು ಭಾಗವಹಿಸಿದ್ದರು.
ಖತ್ರಿ ಆಂಗ್ಲಭಾಷೆಯ ಪತ್ರಿಕೆಯೊಂದಿಗೆ ಮಾತಾಡುತ್ತಾ ತಾನು ಒಲಿಂಪಿಕ್ ವಿಜೇತ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ ದತ್‌ರಿಂದ ಪ್ರೇರಿತನಾಗಿರುವೆ. ಮತ್ತು ತಾನು ಪ್ರತಿದಿವಸ ಆರುಗಂಟೆ ಅಭ್ಯಾಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಸೋನಪತ್ ನ ಪಂಜಿ ಗ್ರಾಮದ ಖತ್ರಿ ನಾನ್ ವೆಜಟರಿಯನ್ ಆಗಿದ್ದು ದಿನಾಲು ಮೊಟ್ಟೆ, ಚಿಕನ್ ಮತ್ತು ನಾಲ್ಕರಿಂದ ಐದು ಲೀಟರ್ ಹಾಲು ಕುಡಿಯುತ್ತಾರೆ. ನ್ಯಾಶನಲ್ ಲೆವೆಲ್ ವಿನ್ನರ್ ಆಗಿರುವ ಆರು ಪೈಲ್ವಾನರಲ್ಲಿ ಒಬ್ಬರಾಗಿದ್ದು ಹರಿಯಾಣ ಪೊಲೀಸ್‌ನಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದಾರೆ. ಏಶಿಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಒಲಿಂಪಿಕ್ಸ್‌ನಲಿ ಸ್ಪರ್ಧಿಸುವ ಕನಸು ಇಟ್ಟುಕೊಂಡಿದ್ದಾರೆಂದು ವರದಿಯಾಗಿದೆ.







