ಆಲಂಕಾರಿನಲ್ಲಿ ಲೋ-ವೋಲ್ಟೇಜ್ಗೆ ಪಂಪ್ಶೆಡ್ ಭಸ್ಮ- ಕುಡಿಯುವ ನೀರಿಗಾಗಿ ಆಹಾಕಾರ.

ಸುಟ್ಟು ಕರಕಲಾಗಿರುವ ಪಂಪ್ಶೆಡ್
ಕಡಬ: ಏರುತ್ತಿರುವ ತಾಪಮಾನ , ರಾಜ್ಯದಲ್ಲಿ ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಯಿಂದಾಗಿ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಲೋ-ವೋಲ್ಟೆಜ್ ಸಮಸ್ಯೆಯಂತೂ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ರೈತರು ಕೃಷಿಗಾಗಿ , ಕುಡಿಯುವ ನೀರಿನ ಪೂರೈಕೆಗಾಗಿ ಸ್ಥಳಿಯಾಡಳಿತಗಳು ಅಳವಡಿಸಿರುವ ಪಂಪುಸೆಟ್ಟುಗಳಲಿ ನೀರೆತ್ತಲು ಆಗುತ್ತುಲ್ಲ. ಕಡಬದ ಹಲವೆಡೆ ಪಂಪು ಚಾಲು ಆಗದೆ ಇರುವುದರಿಂದ ಕುಡಿಯುವ ನೀರಿನ ಪೂರೈಕೆಯನ್ನೇ ನಂಬಿದ ಜನತೆ ಪರದಾಡುತ್ತಿದ್ದಾರೆ. ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಈ ನಡುವೆ ಆಲಂಕಾರು ಗ್ರಾಮದ ಬುಡೇರಿಯಾ ಕಾಲೋನಿಯ ಕುಡಿಯುವ ನೀರಿನ ಪಂಪ್ಶೆೆಡ್ ಲೋವೋಲ್ಟೆಜ್ ನಿಂದಾಗಿ ಸುಟ್ಟು ಈ ಭಾಗದ ಜನತೆ ಕುಡಿಯುವ ನೀರಿಗಾಗಿ ಆಹಾಕಾರ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬುಡೇರಿಯಾ ಪರಿಶಿಷ್ಟ ಜಾತಿ - ಪಂಗಡದ ಕಾಲೋನಿಗಾಗಿ ಜಿ.ಪಂ ಅನುದಾನದಲ್ಲಿ ಆಲಂಕಾರು ಗ್ರಾಮ ಪಂಚಾಯಿತಿ ಕೊಳವೆ ಬಾವಿಯನ್ನು ನಿರ್ಮಿಸಿ ಬೃಹತ್ ಟ್ಯಾಂಕ್ನಲ್ಲಿ ನೀರು ಸಂಗ್ರಹಿಸಿ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿತ್ತು. ಸೋಮವಾರ ರಾತ್ರಿ ಲೋ-ವೋಲ್ಟೇಜ್ನಿಂದಾಗಿ ರಾತ್ರಿ ಬೆಂಕಿ ಹುಟ್ಟಿಕೊಂಡು ಪಂಪ್ ಶೆಡ್ ಭಸ್ಮವಾಗಿದೆ. ಇದೀಗ ಪಂಪ್ ಕೆಟ್ಟಿರುವ ಕಾರಣ ಜೊತೆಗೆ ಈ ಭಾಗದಲ್ಲಿದ್ದ ಕೈಪಂಪ್ ಬೋರ್ವೆಲ್ ಕೆಟ್ಟು ಹೋಗಿರುವ ಪರಿಣಾಮ ಕುಡಿಯುವ ನೀರಿಗಾಗಿ 1 ಕಿ.ಮೀ ದೂರದಲ್ಲಿರುವ ಕುಮಾರಧಾರ ನದಿಯನ್ನು ಆಶ್ರಯಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಜ.26ರಂದು ಈ ಹೊಸ ಕೊಳವೆ ಬಾವಿಗೆ ಪಂಪ್ ಇಳಿಸಿ ನೀರು ಸರಬರಾಜಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ಆದರೆ ಈ ವರ್ಷದ ಅರಂಭದಿಂದ ವಿದ್ಯುತ್ ಅಭಾವ ಜೊತೆಗೆ ಲೋ-ವೋಲ್ಟೇಜ್ ಸಮಸ್ಯೆಯಿಂದಾಗಿ ಕೇವಲ ಎರಡೇ ತಿಂಗಳಲ್ಲಿ ಪಂಪ್ ಸೆಡ್ ಬೆಂಕಿಗೆ ಬಲಿಯಾಗಿದೆ. ಪಂಪ್ಶೆಡ್ ಲೋ-ವೋಲ್ಟೇಜ್ಗೆ ಬಲಿಯಾಗಿದೆ.
ಪ್ರತಿಭಟನೆಗೆ ತಯಾರಿ
ಆಲಂಕಾರು ವ್ಯಾಪ್ತಿಯಲ್ಲಿ ತಲೆದೂರಿರುವ ವಿದ್ಯುತ್ ಲೋ-ವೋಲ್ಟೆಜ್ನ ಸಮಸ್ಯೆಯ್ನು ಪರಿಹರಿಸಬೇಕೆಂದು ಮೆಸ್ಕಾಂ ವಿರುದ್ದ ಪ್ರತಿಭಟನೆಗೆ ಪೂರ್ವ ಸಿದ್ದತೆಗಳು ಸಾರ್ವಜನಿಕ ವಲಯದಿಂದ ನಡೆಯುತ್ತಿದೆ. ಆಲಂಕಾರು ವ್ಯಾಪ್ತಿಯಲಿ ಲೋ- ವೋಲ್ಟೆಜ್ ಸಮಸ್ಯೆಯಿಂದಾಗಿ ಹಲವಾರು ಮಂದಿ ಕೃಷಿಕರು ತಮ್ಮ ಪಂಪ್ ಸೆಟ್ಗಳನ್ನು ಈಗಾಗಲೆ ಕಳೆದುಕೊಂಡಿದ್ದಾರೆ.ತಾವು ನೆಟ್ಟು ಬೆಳೆಸಿದ ಕೃಷಿಯಲ್ಲಿ ಉತ್ಪಾದಿಸಿದ ಉತ್ಪಾದನೆಯ ಅಧಿಕ ಭಾಗವನ್ನು ಪಂಪ್ಸೆಟ್ ದುರಸ್ತಿಗಾಗಿ ವಿನಿಯೋಗಿಸುವ ಪ್ರಮೇಯ ಇದೀಗ ಎದುರಾಗಿರುವುದರ ಜೊತೆಗೆ ತಮ್ಮ ಕೃಷಿಯನ್ನು ಕಳೆದುಕೊಳ್ಳ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಸಮಸ್ಯೆಯಿಂದ ಬೆಂದಿರುವ ಆಲಂಕಾರಿನ ರೈತಾಪಿ ಜನತೆ ಮೆಸ್ಕಾಂ ವಿರುದ್ದ ಪ್ರತಿಭಟನೆಗೆ ಸಿದ್ದತೆ ನಡೆಸುತ್ತಿದ್ದಾರೆ.
-------------------------------------------------------
ಸುಧಾಕರ ಪೂಜಾರಿ-ಆಲಂಕಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು.
ಲೋ- ವೋಲ್ಟೇಜ್ನಿಂದಾಗಿ ಉಂಟಾದ ಬೆಂಕಿಯಿಂದಾಗಿ ಪಂಪುಶೆಡ್ಡಿನಲ್ಲಿದ್ದ ವಿದ್ಯುತ್ ಮೀಟರ್ ಸೇರಿದಂತೆ ಇತರ ವಿದ್ಯುತ್ ಪರಿಕರಗಳು ಸುಟ್ಟು ಹೋಗಿದೆ. ಇದೀಗ ಕುಡಿಯುವ ನೀರಿಗಾಗಿ ಆಹಾಕಾರ ಎದುರಾಗಿದೆ. ಈ ವಿಚಾರವಾಗಿ ಮೆಸ್ಕಾಂ ಅಧಿಕಾರಿಗಳಿಗೆ ವಿಚಾರ ತಿಳಿಸಲಾಗಿದೆ. ಜೊತೆಗೆ ಜಿಲ್ಲಾ ಪಂಚಾಯಿತಿಗೂ ತಿಳಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯಾದ ಕಾರಣ ಪಂಚಾಯಿತಿ ಶೀಘ್ರವೇ ಪಂಪ್ಶೆಡನ್ನು ದುರಸ್ತಿ ಮಾಡುವ ಕಾರ್ಯವನ್ನು ಮಾಡಲಿದೆ.
---------------------------------------------------------
ಮೆಸ್ಕಾಂ ಆಲಂಕಾರು ಶಾಖಾಧಿಕಾರಿ, ತಿಲಕ್.
ಬುಡೇರಿಯಾ ಕಾಲೋನಿಯ ಕುಡಿಯುವ ನೀರಿನ ಪಂಪ್ಶೆಡ್ನ ವಿದ್ಯುತ್ ಮೀಟರ್ ಬೆಂಕಿಗೆ ಆಹುತಿಯಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಪಂಚಾಯಿತಿ ಕೆಟ್ಟುಹೋಗಿರುವ ಪಂಪ್ಶೆಡ್ನ್ನು ದುರಸ್ತಿ ಮಾಡಿಕೊಟ್ಟ ತಕ್ಷಣ ಮೀಟರ್ ಅಳವಡಿಸಲಾಗುವುದು. ನೀರು ಪೂರೈಕೆಗೆ ಅನುವು ಮಾಡಿಕೊಡಲಾಗುವುದು.







