ಎಕೆಜಿ ಗ್ರಂಥಾಲಯ ದಹನ ಪ್ರಕರಣ: ಇಬ್ಬರು ಆರೆಸ್ಸೆಸ್ ಕಾರ್ಯಕರ್ತರ ಬಂಧನ

ತಿರುವನಂತಪುರ, ಮಾ.24: ತಿರೂರು ಸಮೀಪದ ಬಿಪಿ ಅಂಗಡಿ ಬಳಿ ಸಿಪಿಎಂ ಪಕ್ಷದ ಸ್ವಾಮ್ಯದಲ್ಲಿರುವ ಎಕೆಜಿ ಸ್ಮಾರಕ ಗ್ರಂಥಾಯವನ್ನು ಮಂಗಳವಾರ ಬೆಳಗ್ಗಿನ ಜಾವ ಬೆಂಕಿಗಾಹುತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಸುಕಿನ 2 ಗಂಟೆಯ ಸುಮಾರಿಗೆ ದುಷ್ಕರ್ಮಿಗಳು ಪುಸ್ತಕಗಳು, ಪೀಠೋಪಕರಣಗಳು ಮತ್ತು 40 ಲಕ್ಷ ಮೌಲ್ಯದ ಇತರ ಆಸ್ತಿಯನ್ನು ಬೆಂಕಿಗಾಹುತಿ ನೀಡಿದ್ದರು ಎನ್ನಲಾಗಿದೆ.
ಆರೆಸ್ಸೆಸ್ ಮತ್ತು ಸಿಪಿಎಂ ಕಾರ್ಯಕರ್ತರ ಸೋಮವಾರ ಸಂಜೆ ತಲ್ಲಕ್ಕರ ಎಂಬಲ್ಲಿ ಜಗಳವಾಡಿದ್ದರು .ಗೋಡೆ ಬರಹವೊಂದರ ವಿಷಯಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಮತ್ತು ಸಿಪಿಎಂ ನಡುವಿನ ಕಲಹದಿಂದಾಗಿ ಈ ಭಾಗದಲ್ಲಿ ಪ್ರಕ್ಷುಬ್ಧ ವಾತವರಣ ನಿರ್ಮಾಣಗೊಂಡಿದೆ.
ಗೋಡೆಯ ಮೇಲೆ ಬರೆಯುವ ಮೂಲಕ ಆರೆಸ್ಸೆಸ್ ಸಮಸ್ಯೆಯನ್ನು ಸೃಷ್ಟಿಸಿದೆ ಎಂದು ಸಿಪಿಎಂ ನಾಯಕರು ಆರೋಪಿಸಿದ್ದಾರೆ.ಉಭಯ ಪಕ್ಷಗಳನ್ನು ಪೊಲೀಸರು ಸಮಾಧಾನಗೊಳಿಸಿದ್ದರು. ತಲ್ಲಕ್ಕರದಲ್ಲಿ ಮುಂಜಾಗ್ರತಾ ಕ್ರಮವಾಗಿ ರಾತ್ರಿ ವೇಳೆ ಪೊಲೀಸರನ್ನು ನಿಯೋಜಿಸಲಾಗಿದೆ.
ನಸುಕಿನ 2 ಗಂಟೆ ಸುಮಾರಿಗೆ ದುಷ್ಕರ್ಮಿಗಳ ಗುಂಪು ಅಂಚಿನ ಕಟ್ಟಡವನ್ನು ಬೆಂಕಿಗಾಹುತಿ ನೀಡುವ ಮುನ್ನ ಗ್ರಂಥಾಲಯದ ಆವರಣಕ್ಕೆ ನುಗ್ಗಿ ಪುಸ್ತಕ ಮತ್ತು ಪೀಠೋಪಕರಣವನ್ನು ಧ್ವಂಸಗೊಳಿತ್ತು.ಅಲ್ಲದೇ,ಕರ್ತವ್ಯದಲ್ಲಿದ್ದ ಪೊಲೀಸರು ಮಧ್ಯರಾತ್ರಿಯ ವೇಳೆ ಕಣ್ಮರೆಯಾಗಿದ್ದರು ಎಂದು ಸಿಪಿಎಂ ನಾಯಕರು ಆರೋಪಿಸಿದ್ದಾರೆ.
ತಲ್ಲಕ್ಕರದಲ್ಲಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ ಹಾಗೂ ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.







